ವಶಪಡಿಸಿಕೊಂಡ ವಾಹನಗಳನ್ನು ಠಾಣೆ ಮುಂದೆ ನಿಲ್ಲಿಸುವಂತಿಲ್ಲ, ಷರತ್ತು ವಿಧಿಸಿ ಕೂಡಲೇ ಬಿಡುಗಡೆ ಮಾಡಬೇಕು: ಹೈಕೋರ್ಟ್

Update: 2022-11-10 17:06 GMT

ಬೆಂಗಳೂರು, ನ.10: ಕ್ರಿಮಿನಲ್ ಪ್ರಕರಣಗಳಲ್ಲಿ ಮಾಲಕರಿಂದ ವಶಪಡಿಸಿಕೊಂಡಿರುವ ವಾಹನಗಳನ್ನು (Seized vehicles) ಕೇಸ್‍ನ ವಿಚಾರಣೆಯ ಸಂದರ್ಭದಲ್ಲಿ ಪೊಲೀಸ್ ಠಾಣೆಗಳ ಮುಂದೆ ನಿಲ್ಲಿಸುವಂತಿಲ್ಲ. ಈ ಕೂಡಲೇ ಅವುಗಳನ್ನು ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ (High Court of Karnataka) ನಿರ್ದೇಶನ ನೀಡಿದೆ. 

ಈ ಕುರಿತು ಜವ್ವಾಜಿ ಧನ ತೇಜ ಮತ್ತು ಇತರರು  ಸಲ್ಲಿಸಿದ್ದ ಅರ್ಜಿ  ಮಾನ್ಯ ಮಾಡಿರುವ ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರಿಗೆ ವಾಹನಗಳನ್ನು ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

ವಶಪಡಿಸಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಯ ಮುಂದೆ ಸುಮ್ಮನೆ ನಿಲ್ಲಲ್ಲು ಅವಕಾಶ ನೀಡಬಾರದು. ಶ್ಯೂರಿಟಿ ಯೊಂದಿಗೆ ವಾಹನಗಳನ್ನು ಬಿಡುಗಡೆ ಮಾಡಬೇಕು. ಜತೆಗೆ ವಿಚಾರಣಾ ನ್ಯಾಯಾಲಯವು ವಾಹನ ಬಿಡುಗಡೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವುದೂ ಸರಿಯಲ್ಲ ಎಂದು ನ್ಯಾಯಪೀಠವು ಆದೇಶದಲ್ಲಿ ಉಲ್ಲೇಖಿಸಿದೆ. 

ಗುಜರಾತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪುಯೊಂದನ್ನು ಉಲ್ಲೇಖಿಸಿರುವ ಹೈಕೋರ್ಟ್ ನ್ಯಾಯಪೀಠವು ಸುಪ್ರೀಂಕೋರ್ಟ್‍ನ ಆದೇಶದಲ್ಲಿ ಪೊಲೀಸ್ ಠಾಣೆಗಳ ಮುಂದೆ ವಾಹನಗಳನ್ನು ಸುಮ್ಮನೆ ನಿಲ್ಲಿಸಬಾರದೆಂದು ಹಾಗೂ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ವಾಹನಗಳನ್ನು ಮಾಲಕರಿಗೆ ಬಿಡುಗಡೆ ಮಾಡಬೇಕೆಂದು ಹೇಳಿದೆ ಎಂದು ತಿಳಿಸಿದೆ.     
 
         

Similar News