ಶಿರಸಿ | ಖಾಸಗಿ ಶಾಲೆಯ ಬಸ್ ಪಲ್ಟಿ: ಮಹಿಳಾ ಸಿಬ್ಬಂದಿ ಮೃತ್ಯು, ಹಲವರಿಗೆ ಗಾಯ
Update: 2022-11-11 07:14 GMT
ಶಿರಸಿ: ಖಾಸಗಿ ಶಾಲೆಯ ಬಸ್ ಪಲ್ಟಿಯಾಗಿ ಶಾಲೆಯ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಬುಗುಡಿಕೊಪ್ಪ ಸಮೀಪ ನಡೆದಿರುವುದಾಗಿ ವರದಿಯಾಗಿದೆ.
ರಾಣೆಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರ ಶಾಲೆಯ ಸಿಬ್ಬಂದಿ ಕಸ್ತೂರಮ್ಮ (60) ಮೃತರು.
ಘಟನೆಯಿಂದ 8 ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಶಾಲೆಗೆ ರಜೆ ಇದ್ದ ಕಾರಣ ಶಾಲೆಯ ಸಿಬ್ಬಂದಿ ಶಿರಸಿಗೆ ಪ್ರವಾಸ ತೆರಳಿದ್ದರು. ರಾಣೆಬೆನ್ನೂರಿನಿಂದ ಬರುವ ವೇಳೆ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಬನವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.