ವಿಜಯಪುರ | ಕಂಬಕ್ಕೆ ಕಟ್ಟಿ ದಲಿತ ಯುವಕನಿಗೆ ಹಲ್ಲೆ ಆರೋಪ: 14 ಮಂದಿ ವಶಕ್ಕೆ
Update: 2022-11-12 16:55 GMT
ವಿಜಯಪುರ: ದಲಿತ ಯುವಕನ ಮೇಲಿನ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರೂಸ್ ನಲ್ಲಿ ಪಾಲ್ಗೊಂಡು ಹಿಂತಿರುಗಿತ್ತಿದ್ದ ವೇಳೆ ಸಾಗರ್ ಎಂಬಾತನನ್ನು ಕಂಬಕ್ಕೆ ಕಟ್ಟಿಹಾಕಿ ಸವರ್ಣೀಯರು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
ಈ ಸಂಬಂಧ ಪೊಲೀಸರು 14 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.