ಒಂದಷ್ಟು ಮಂದಿಗೆ ಅಲರ್ಜಿ ಇದೆ...: ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ವಿವಾದದ ಬಗ್ಗೆ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

Update: 2022-11-13 13:48 GMT

ಬೆಂಗಳೂರು, ನ. 13: ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಶಾಲೆಗಳಿಗೆ ರಾಜ್ಯ ಸರಕಾರವು ಸ್ವಾಮಿ ವಿವೇಕಾನಂದ ಹೆಸರನ್ನು ಇಡುತ್ತಿದ್ದು, ಈ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣವನ್ನು ಹಚ್ಚಲು ಮುಂದಾಗಿದೆ. ರಾಜ್ಯಾದ್ಯಂತ 992 ಕೋಟಿ ವೆಚ್ಚದಲ್ಲಿ 8,100 ಶಾಲಾ ಕಾಲೇಜು ಕೊಠಡಿಗಳ ನಿರ್ಮಾಣ ಕಾರ್ಯಆರಂಭಿಸಲಾಗಿದೆ.

ರವಿವಾರ ಗದಗದಲ್ಲಿ ಸುದ್ದಿಗಾರರೊಂದಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ''ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಹಚ್ಚಬೇಕು ಎಂದು ಆರ್ಕಿಟೆಕ್ಟ್ ಗಳು ನಿರ್ಧರಿಸುತ್ತಾರೆ. ಕೇಸರಿ ಚೆನ್ನಾಗಿದೆ ಎಂದು ಅವರು ಹೇಳಿದ್ದರಿಂದ ಕೇಸರಿ ಬಣ್ಣ ಹಾಕುತ್ತಿದ್ದೇವೆ. ಬಣ್ಣ, ಕಿಟಕಿ ಮುಂತಾದವುಗಳ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆರ್ಕಿಟೆಕ್ಟ್ ಕೊಡುವ ಡಿಸೈನ್ ಪ್ರಕಾರವೇ ಎಲ್ಲವೂ ನಡೆಯುತ್ತದೆ. ಒಂದಷ್ಟು ಮಂದಿಗೆ ಬಣ್ಣದ ಅಲರ್ಜಿ ಇದೆ'' ಎಂದರು.

''ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣ ಇದೆ. ಅದನ್ನು ಏಕೆ ಇರಿಸಿಕೊಂಡಿದ್ದಾರೆ. ಪೂರ್ತಿ ಹಸಿರು ಮಾಡಿಕೊಳ್ಳಲಿ'' ಎಂದು ಅವರು ಕಿಡಿ ಕಾರಿದರು.

Similar News