ನಂದಿನಿ ಹಾಲು, ಮೊಸರಿನ ದರ 3 ರೂ. ಹೆಚ್ಚಳ; ಮಂಗಳವಾರದಿಂದ ಪರಿಷ್ಕೃತ ದರ ಜಾರಿ

Update: 2022-11-14 14:41 GMT

ಬೆಂಗಳೂರು, ನ. 14: ‘ನಂದಿನಿ’ ಬ್ರ್ಯಾಂಡ್‍ನ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‍ಗೆ 3 ರೂ.ಗಳನ್ನು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ನಾಳೆ(ನ.15)ಯಿಂದಲೇ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ತಿಳಿಸಿದೆ.

ನಂದಿನಿ ಹಾಲಿನ ನೀಲಿ ಪ್ಯಾಕೇಟ್ (ಟೋನ್ಡ್ ಹಾಲು) 37ರೂ.ನಿಂದ 40 ರೂ., ಹೋಮೋಜಿನೈಸ್ಡ್ ಟೋನ್ಡ್ ಹಾಲು-38 ರೂ.ನಿಂದ 41 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಸ್ಪೇಷಲ್ ಹಾಲು 43 ರೂ.ನಿಂದ 46ರೂ., ಶುಭಂ ಹಾಲು-43 ರೂ.ನಿಂದ 46 ರೂ., ಸಮೃದ್ಧಿ ಹಾಲು-48 ರೂ.ನಿಂದ 51 ರೂ., ಮೊಸರು ಪ್ರತಿ ಕೆಜಿಗೆ 45 ರೂ.ನಿಂದ 48 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳಲ್ಲಿ ಕಂಡುಬಂದ ಚರ್ಮಗಂಟು ರೋಗ, ಅತಿವೃಷ್ಟಿ ಸೇರಿದಂತೆ ಇನ್ನಿತರ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗಲು ನಂದಿನಿ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಹಾಲಿನ ದರ ಹೆಚ್ಚಳ ಮಾಡಿರುವ ಪೂರ್ಣ ಮೊತ್ತವನ್ನು ರೈತರಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಕೆಎಂಎಫ್ ಮಾಹಿತಿ ನೀಡಿದೆ.

''ನಂದಿನಿ ಹಾಲು, ಮೊಸರಿನ ಬೆಲೆ ಹೆಚ್ಚಳ ಸಂಬಂಧ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿದೆ. ನ.20ರಂದು ಕೆಎಂಎಫ್ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನ ಕರೆದು ಸಭೆ ನಡೆಸಿ, ರೈತರಿಗೆ ಅನುಕೂಲ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಕೆ ಕುರಿತು ಅಂತಿಮ ನಿರ್ಧಾರಕ್ಕೆ ಕೈಗೊಳ್ಳಲಾಗುವುದು’'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

----------------------------------------------

ಪರಿಷ್ಕೃತ ದರ ಹೀಗಿದೆ... 

Similar News