ಚಿಕ್ಕಮಗಳೂರಿಗೆ ಸಿಎಂ ಭೇಟಿ ಹಿನ್ನೆಲೆ: ಅಂಗಡಿಗಳನ್ನು ಬಂದ್ ಮಾಡಿಸಿದ ಪೊಲೀಸರು
ಪೊಲೀಸರ ನಡೆಗೆ ಅಂಗಡಿ ಮಾಲಕರ ಅಸಮಾಧಾನ
Update: 2022-11-15 06:02 GMT
ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿಗೆ ಆಗಮನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಗಡಿಗಳನ್ನು ಪೊಲೀಸರು ಮಂಗಳವಾರ ಬಂದ್ ಮಾಡಿಸಿರುವುದಾಗಿ ವರದಿಯಾಗಿದೆ.
ಕಡೂರಿನ ಹೆಲಿಪ್ಯಾಡ್ ನಿಂದ ಎಪಿಎಂಸಿವರೆಗಿನ ಸಿ.ಎಂ.ಸಾಗುವ ದಾರಿಯಲ್ಲಿ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಸಿ.ಎಂ.ತೆರಳಿದ ಬಳಿಕ ಓಪನ್ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಪೊಲೀಸರ ಈ ನಡೆಗೆ ಅಂಗಡಿ ಮಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.