ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಅದು ಮನೆ ಮಾತ್ರ, ಅಲ್ಲೇ ಇರುವುದು ಕ್ಷೇಮ: BJP ವ್ಯಂಗ್ಯ

Update: 2022-11-15 17:01 GMT

ಬೆಂಗಳೂರು: ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ರವಿವಾರ ವಿಶೇಷ ಬಸ್ ಮೂಲಕ ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, 'ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ' ಎಂದು ಬಿಜೆಪಿ (BJP) ವ್ಯಂಗ್ಯವಾಡಿದೆ. 

ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ (@BJP4Karnataka), '' ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎನ್ನುತ್ತಿರುವ ಸಿದ್ದರಾಮಯ್ಯ, ತಾನು ಗೆಲ್ಲುವ ಕ್ಷೇತ್ರವಿಲ್ಲದೇ ಅಲೆದಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ 40 ವರ್ಷದ ರಾಜಕೀಯ ಜೀವನದ ಸೋಲು. ಸದ್ಯಕ್ಕೆ ಅವರಿಗೆ ಸುರಕ್ಷಿತ ಕ್ಷೇತ್ರ ಅಂದ್ರೆ ಮನೆ ಮಾತ್ರ. ಅಲ್ಲೇ ಇರುವುದು ಕ್ಷೇಮ'' ಎಂದು ಹೇಳಿದೆ. 

► ಡಿಕೆಶಿ ವಿರುದ್ಧ ಟೀಕೆ

''ನಮ್ಮ ನಾಯಕರೆಲ್ಲ ಜನ ಸಂಕಲ್ಪದಲ್ಲಿ ತೊಡಗಿಸಿಕೊಂಡಿದ್ದರೆ ಡಿ.ಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಜಾರಿಕೊಳ್ಳುವುದು ಹೇಗೆ ಎಂಬ ಚಿಂತನೆಯಲ್ಲಿ ಮಗ್ನರಾಗಿದ್ದಾರೆ. ಮಾವಿನ ಕೃಷಿ ಮಾಡಿ ಕೋಟ್ಯಂತರ ಸಂಪಾದಿಸಿದ ಬಗೆ ಹೇಗೆ ಎಂಬುದನ್ನು ಇಡಿಗೆ ತಿಳಿಸಲು ಸೂತ್ರಗಳ ಹುಡುಕಾಟದಲ್ಲಿದ್ದಾರೆ'' ಎಂದು ಕೆಪಿಸಿಸಿ ಅಧ್ಯಕ್ಷರನ್ನು ಬಿಜೆಪಿ ಟೀಕಿಸಿದೆ. 

''ತಮ್ಮ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದೂ ಅಲ್ಲದೆ ಕೋಟಿಗಟ್ಟಲೆ ಮೌಲ್ಯದ ಸಂಪತ್ತನ್ನು ತಾಯಿಯ ಹೆಸರಿನಲ್ಲಿಯೂ, ಉಡುಗೊರೆ ರೂಪದಲ್ಲಿ ಮಗಳ ಹೆಸರಿನಲ್ಲಿಯೂ ತೋರಿಸಿದ್ದಾರೆ. ಈಗ ಯಾರ್ಯಾರ ಹೆಸರಲ್ಲಿ ಎಷ್ಟೆಷ್ಟಿವೆ ಎಂಬುದು ಸ್ವತಃ ಡಿಕೆಶಿ ಅವರಿಗೇ ಗೊಂದಲವಾಗಿದೆ'' ಎಂದು ಬಿಜೆಪಿ ಟ್ವೀಟ್ ಮಾಡಿದೆ. 

Similar News