ಪಾವಗಡ | ಉರುಳಿಬಿದ್ದ ಖಾಸಗಿ ಬಸ್: ಹಲವು ಮಂದಿ ಕಾರ್ಮಿಕರಿಗೆ ಗಾಯ

Update: 2022-11-18 03:58 GMT

ಪಾವಗಡ, ನ.18: ಖಾಸಗಿ ಕಂಪೆನಿಯೊಂದರ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ (Accident) ಘಟನೆ ಪಾವಗಡ ತಾಲೂಕಿನ ವಿರುಪಸಮುದ್ರ ಗಡಿದ ಹೊನ್ನಮ್ಮಪಲ್ಲಿ ಬಳಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.

ಘಟನೆ ವೇಳೆ ಬಸ್ಸಿನಲ್ಲಿ 50ರಷ್ಟು ಕಾರ್ಮಿಕರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

  ಹಿಂದೂಪುರದ ಕಿಯೋ ಕಂಪೆನಿಗೆ ಆಂಧ್ರ ಹಾಗೂ ಪಾವಗಡ ಗ್ರಾಮಗಳಾದ  ವೀರಪ್ಪ ಸಮುದ್ರ  ವೆಂಕಟಾಪುರ ರಾಜವಂತಿ ಕಣಿವೆನಹಳ್ಳಿ ಪಾವಗಡ ಪಟ್ಟಣ ಸೇರಿ ತಾಲೂಕಿನ ಹಲವು ಹಳ್ಳಿಗಳಿಂದ  ಕೆಲಸಕ್ಕಾಗಿ ನಿತ್ಯ ಕಾರ್ಮಿಕರು ತೆರೆಳ್ಳುತ್ತಾರೆ. ಈ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಬಸ್ ಹೊನ್ನಂಪಳ್ಳಿ ಬಳಿ ರಸ್ತೆ ಹೊಂಡ-ಗುಂಡಿ ಕಾರಣ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.

ವಾಹನದಲ್ಲಿ ಬಹುತೇಕ ಹೆಣ್ಣು ಮಕ್ಕಳೇ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದ್ದು,  ಗಾಯಗೊಂಡಿರುವವರನ್ನು  ಹತ್ತಿರದ ಆಸ್ಪತ್ರೆಗೆ  ದಾಖಲಿಸಲಾಗಿದೆ.

ಸ್ಥಳಕ್ಕೆ ಆಂಧ್ರ ಗಡಿಭಾಗದ ಪರಗಿ  ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News