ಎಚ್.ಡಿ.ಕೋಟೆ | ಬೆಳೆ ಸಾಲ ನಿರಾಕರಣೆ ಆರೋಪ: ಬ್ಯಾಂಕ್‌ನಲ್ಲೇ ವಿಷಸೇವಿಸಿದ ರೈತ

Update: 2022-11-22 05:46 GMT

ಮೈಸೂರು, ನ.22: ಬೆಳೆ ಸಾಲ ನಿರಾಕರಿಸಿದ ಹಿನ್ನೆಲೆ ರೈತನೋರ್ವ ಬ್ಯಾಂಕ್‌ನಲ್ಲೇ ಕೀಟನಾಶಕ ಸೇವಿಸಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಹೋಬಳಿಯ ಹೊಸಹೊಳಲು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.

ಹೊಸಹೂಳಲು ಗ್ರಾಮದ ನಿಂಗೇಗೌಡ(73) ಎಂಬವರೇ ವಿಷ ಸೇವಿಸಿದ ರೈತನಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಂಗೇಗೌಡ 4 ಎಕರೆ ಜಮೀನು ಹೊಂದಿದ್ದು, ಅಂತರ ಸಂತೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಕಬ್ಬಿನ ಬೆಳೆ ಸಾಲಕ್ಕೆ ಅರ್ಜಿ ಹಾಕಿದ್ದರು. ಒಂದು ತಿಂಗಳ ನಂತರ ಬ್ಯಾಂಕ್‌ನವರು ಸಿಬಿಲ್ ರೇಟ್ ಕಡಿಮೆ ಇದೆ ನಿಮಗೆ ಸಾಲ ಕೊಡಲು ಬರುವುದಿಲ್ಲ ಎಂದು ತಿಳಿಸಿ ನೋಟಿಸ್ ಕೊಟ್ಟ ಕಾರಣ ಬೇಸರಗೊಂಡ ನಿಂಗೇಗೌಡ ಬ್ಯಾಂಕಿನಲ್ಲಿಯೇ ವಿಷ ಸೇವಿಸಿ ಅಸ್ವಸ್ಥರಾದರು ಎನ್ನಲಾಗಿದೆ.

ಕೂಡಲೇ ಬ್ಯಾಂಕಿನ ಸಿಬ್ಬಂದಿ ನಿಂಗೇಗೌಡರ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದರು. ನಂತರ ಅಸ್ವಸ್ಥಗೊಂಡ ನಿಂಗೇಗೌಡರನ್ನು ಎಚ್.ಡಿ.ಕೋಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Similar News