JDS ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮ್ ಸಮುದಾಯದವರು ಸಿಎಂ ಆಗಬಹುದು: ಎಚ್. ಡಿ. ಕುಮಾರಸ್ವಾಮಿ
''ಮಹಿಳೆಯರನ್ನ ಡಿಸಿಎಂ ಮಾಡಲು ಸಿದ್ಧ''
Update: 2022-11-22 12:34 GMT
ಕೋಲಾರ: ''ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಮ್ ಸಮುದಾಯದವರು ಮುಖ್ಯಮಂತ್ರಿ ಆಗಬಹುದು'' ಎಂದು ಜೆಡಿಎಸ್ (JDS) ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತಾಲೂಕಿನ ಕ್ಯಾಲನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅವಕಾಶ ಬಂದರೆ ಮುಸ್ಲಿಮ್ ಸಮುದಾಯದವರು ಸಿಎಂ ಆಗಬಹುದು, ಅವರು ಯಾಕೆ ಆಗಬಾರದು? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ.ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ'' ಎಂದು ಹೇಳಿದರು.
''ಮಹಿಳೆಯರ ಪ್ರಾಮಾಣಿಕ ಅಭಿವೃದ್ಧಿ ಗೆ ಜೆಡಿಎಸ್ ಬದ್ಧವಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದರೆ ಮಹಿಳೆಯರನ್ನ ಡಿಸಿಎಂ ಮಾಡಲು ಸಿದ್ಧವಿದ್ದೇವೆ'' ಎಂದು ಕುಮಾರಸ್ವಾಮಿ ತಿಳಿಸಿದರು.