ಕುಶಾಲನಗರ; ಹಸುವಿಗೆ ಸ್ಕೂಟರ್ ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
Update: 2022-11-23 11:52 GMT
ಮಡಿಕೇರಿ ನ.23 : ಬಿಡಾಡಿ ಹಸುವೊಂದಕ್ಕೆ ಸ್ಕೂಟರ್ ಢಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಶಾಲನಗರದ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.
ರಂಗಸಮುದ್ರದ ನಿವಾಸಿ ಹರಿಶ್ಚಂದ್ರ (42) ಮೃತಪಟ್ಟಿರುವ ಸ್ಕೂಟರ್ ಸವಾರ ಎಂದು ತಿಳಿದು ಬಂದಿದೆ.
ಕುಶಾಲನಗರದ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹರಿಶ್ಚಂದ್ರ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗುಡ್ಡೆಹೊಸೂರು-ರಂಗಸಮುದ್ರ ಮಾರ್ಗದ ಬೆಟ್ಟಗೇರಿ ಬಳಿ ರಸ್ತೆಗೆ ಅಡ್ಡಲಾಗಿ ಚಲಿಸುತ್ತಿದ್ದ ಹಸುವಿಗೆ ಸ್ಕೂಟರ್ ಢಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಸಂಬಂಧ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಟಿಪ್ಪು ನಿಜ ಕನಸುಗಳು' ಕೃತಿ ಮಾರಾಟಕ್ಕೆ ನಿರ್ಬಂಧ ವಿಧಿಸಿದ ಕೋರ್ಟ್