'40% ಕಮಿಷನ್ ರೋಡಲ್ಲಿ ಯಮ ಗುಂಡಿ': ಹೊಸ ಫೇಸ್ ಬುಕ್ ಖಾತೆ ತೆರೆದು ಬಿಜೆಪಿ ವಿರುದ್ಧ ಅಭಿಯಾನ

Update: 2022-11-24 07:27 GMT

ಬೆಂಗಳೂರು: ರಾಜ್ಯ ಸರ್ಕಾರ ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಗುತ್ತಿಗೆದಾರರಲ್ಲಿ ಶೇ.40 ರಷ್ಟು ಕಮಿಷನ್ ಗೆ ಬೇಡಿಕೆ ಇಡುತ್ತಿದೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ '40% ಸರ್ಕಾರ' ಎಂಬ ಹೊಸ ಖಾತೆ ತೆರೆದು ಬಿಜೆಪಿ (BJP Karnataka) ವಿರುದ್ಧ ಅಭಿಯಾನ ಆರಂಭಿಸಲಾಗಿದೆ. 

ಈ ಫೇಸ್ ಬುಕ್ ಖಾತೆಯಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ ಸೇರಿದಂತೆ ಹಲವು ಸಚಿವ ಸಂಪುಟದ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವರ ಫೋಟೋಗಳನ್ನು ಬಳಿಸಿ  ಟ್ರೋಲ್ ಹಾಗೂ ಪತ್ರಿಕೆಯ ವರದಿಗಳನ್ನು ಪೋಸ್ಟ್ ಮಾಡಲಾಗಿದೆ.

'''40% ಕಮಿಷನ್ ರೋಡಲ್ಲಿ ಯಮ ಗುಂಡಿ, ಯಾಮಾರಿ ಬಿದ್ರೆ 100% ಡಮಾರು'', "ಶಾಲಾ ಮಕ್ಕಳಿಗೆ ಸೈಕಲ್ ಕೊಡದ 40% ಸರ್ಕಾರ", ಎಂಬಿತ್ಯಾದಿ ಪೋಸ್ಟ್ ಗಳ ಮೂಲಕ ರಸ್ತೆ ಗುಂಡಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಪೋಸ್ಟರ್ ಗಳನ್ನು ಪ್ರಕಟಿಸಿ, ರಾಜ್ಯ ಸರಕಾರದ ವಿರುದ್ಧ ಟೀಕಿಸಲಾಗಿದೆ. ಸದ್ಯ ಈ ಫೇಸ್ ಬುಕ್ ಖಾತೆಯನ್ನು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. 


'40% ಸರ್ಕಾರ' ಫೇಸ್ ಬುಕ್ ಖಾತೆಯ ಪೋಸ್ಟ್ ಗಳು ಇಲ್ಲಿವೆ...

Full View Full View Full View Full View Full View Full View Full View Full View Full View Full View Full View Full View

Similar News