ಬಿಜೆಪಿಯ ಸಂಸದರಿದ್ದರೂ ಮಂಗಳೂರಿಗೆ ಎನ್‌ಐಎ ಕಚೇರಿ ತರಲು ಏಕೆ ಸಾಧ್ಯವಾಗಿಲ್ಲ?: ಕಾಂಗ್ರೆಸ್ ಪ್ರಶ್ನೆ
Update: 2022-11-25 09:45 GMT
ಬೆಂಗಳೂರು: ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಚೇರಿಯನ್ನು ಸ್ಥಾಪಿಸುತ್ತೇವೆ ಎಂದಿದ್ದ ಬಿಜೆಪಿ ಇಷ್ಟು ವರ್ಷಗಳ ಕಾಲ ಮಾಡಿದ್ದೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಡಬಲ್ ಇಂಜಿನ್ ಸರ್ಕಾರ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದೇಕೆ?, ಬಿಜೆಪಿಯ 25 ಸಂಸದರಿದ್ದೂ ಎನ್‌ಐಎ ಕಚೇರಿ ತರಲು ಸಾಧ್ಯವಾಗಿಲ್ಲವೇಕೆ?’ ಎಂದು ಪ್ರಶ್ನಿಸಿದೆ.