ಕೊನೆಪಕ್ಷ ಸಿದ್ದರಾಮಯ್ಯಗೆ ಡಿಕೆಶಿ ಟಿಕೆಟ್ ಆದರೂ ಕೊಡುತ್ತಾರಾ?: ಬಿಜೆಪಿ ಪ್ರಶ್ನೆ

Update: 2022-11-26 14:13 GMT

ಬೆಂಗಳೂರು, ನ.26: ಸಿದ್ದರಾಮಯ್ಯರನ್ನು ಕಟ್ಟಿಹಾಕಲು, ಕಾಂಗ್ರೆಸ್‍ನಲ್ಲಿಯೇ ತಂತ್ರ ರೂಪುಗೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಭಾರತ ಜೋಡೊ ಯಾತ್ರೆಯ ಸಭೆಗಳಿಗೂ ಸಿದ್ದರಾಮಯ್ಯರಿಗೆ ಆಹ್ವಾನ ಇರಲಿಲ್ಲ. ನಿನ್ನೆಯ ಟಿಕೇಟ್ ಆಕಾಂಕ್ಷಿಗಳ ಸಭೆಗೂ ಆಹ್ವಾನ ಇರಲಿಲ್ಲ. ಕೊನೆಪಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರಿಗೆ ಟಿಕೇಟ್ ಆದ್ರೂ ಕೊಡ್ತಾರಾ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ನೆಮ್ಮದಿಗೆ ಮತ್ತೆ ಭಂಗಬಂದಿದೆ. ಮೇಲ್ನೋಟಕ್ಕೆ ಅವರ ಪರಮಾಪ್ತರಂತೆ ನಟಿಸುವ ಚೋಡೋ ಗೆಳೆಯ ಡಿ.ಕೆ.ಶಿವಕುಮಾರ್ ಇನ್ನೊಂದು ಬಾಣ ಬಿಟ್ಟಿದ್ದಾರೆ. ಐದು ಜಿಲ್ಲೆಗಳಿಗೆ ದಿಢೀರಂತ ಅಧ್ಯಕ್ಷರನ್ನು ನೇಮಿಸಿ, ಸಿದ್ದರಾಮಯ್ಯನವರು ಬಾಲ ಬಿಚ್ಚದಂತೆ ನೋಡಿಕೊಂಡಿದ್ದಾರೆ ಎಂದು ವ್ಯಂಗವಾಡಿದ್ದಾರೆ.

Similar News