ಕ್ರಿಮಿನಲ್ ಪ್ರಕರಣ ಇದ್ದರೆ ನೋಟಿಸ್ ಜಾರಿ ಮಾಡದೆ ಸರಕಾರಿ ನೌಕರನನ್ನು ಅಮಾನತು ಮಾಡಬಹುದು: ಹೈಕೋರ್ಟ್
Update: 2022-11-27 13:33 GMT
ಬೆಂಗಳೂರು, ನ.27: ಗೃಹ ರಕ್ಷಕ ದಳದ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾದಾಗ ನೋಟಿಸ್ ಜಾರಿ ಮಾಡದೆ ಅಂಥ ಸಿಬ್ಬಂದಿಯನ್ನು ಅಮಾನತು ಮಾಡಬಹುದು ಎಂದು ಹೈಕೋರ್ಟ್ ಹೇಳಿದೆ.
ನಗರದ ಲಗ್ಗೆರೆಯ ಡಿ.ಇ.ಕೆಂಪಾಮಣಿ ಎಂಬುವರು ತಮಗೆ ನೋಟಿಸ್ ಅಮಾನತುಗೊಳಿಸಿದ ಆದೇಶವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಗೃಹ ರಕ್ಷಕ ಸಿಬ್ಬಂದಿ ಶಿಸ್ತಿಗೆ ಹೆಸರಾದ ಪಡೆ. ಇಂಥ ಪಡೆಯ ಸಿಬ್ಬಂದಿಯ ಅಶಿಸ್ತನ್ನು ಸಹಿಸಲಾಗದು. ಜತೆಗೆ ಅಮಾನತು ಎನ್ನುವುದು ಶಿಕ್ಷೆಯಲ್ಲ, ತಾತ್ಕಾಲಿಕ ಕ್ರಮವಾಗಿದೆ. ತನಿಖೆ ಎದುರಿಸಬೇಕಾಗುತ್ತದೆ. ಹೀಗಾಗಿ, ಡಿಜಿಪಿ ಹೊರಡಿಸಿರುವ ಅಮಾನತು ಆದೇಶ ಸಮಂಜಸವಾಗಿದೆ. ಅದರಲ್ಲಿ ಹಸ್ತಕ್ಷೇಪ ಮಾಡಲಾಗದು ಎಂದಿದೆ.