ತುಮಕೂರು | ಲಾರಿ- ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು
Update: 2022-11-29 16:52 GMT
ತುಮಕೂರು,ನ.29: ನಗರ ಹೊರವಲಯದ ಮರಳೂರು ಕೆರೆ ಏರಿಯ ಮೇಲೆ ಮಂಗಳವಾರ ರಾತ್ರಿ 7:15 ಗಂಟೆಯ ಸಮಾರಿಗೆ ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ.
ಮೃತರನ್ನು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಅರುಣ್ (43) ಮತ್ತು ಚೇತನ್ (45) ಎಂದು ಗುರುತಿಸಲಾಗಿದೆ.
ತುಮಕೂರು ಕಡೆಯಿಂದ ಹೊರಟಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿಯಾಗಿ ಢಿಕ್ಕಿಯಾಗಿದೆನ್ನಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.