ಶ್ರೀರಂಗಪಟ್ಟಣ: ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಹನುಮ ಮಾಲಾಧಾರಿಯನ್ನು ತಡೆದ ಪೊಲೀಸರು

Update: 2022-12-04 15:42 GMT

ಮಂಡ್ಯ/ಶ್ರೀರಂಗಪಟ್ಟಣ (Srirangapatna), ಡಿ.4: ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ  ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ರವಿವಾರ ಪೊಲೀಸರ ಬಿಗಿಭದ್ರತೆಯಲ್ಲಿ ನಡೆಯಿತು.

ಪಟ್ಟಣದ ನಿಮಿಷಾಂಬ ದೇವಾಸ್ಥಾನದಿಂದ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು,  ಯಾತ್ರೆ ಐತಿಹಾಸಿಕ ಜಾಮಿಯಾ ಮಸೀದಿ ಬಳಿ ಬಂದಾಗ ಮಾಲಾಧಾರಿಯೋರ್ವನ ಮಸೀದಿ ಪ್ರವೇಶ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. 

ಬಿಗಿಬಂದೋಬಸ್ತ್ ವ್ಯವಸ್ಥೆ: ಯಾತ್ರೆ ಹಿನ್ನೆಯಲ್ಲಿ ಜಿಲ್ಲಾ ಪೊಲೀಸ್ ಬಹಳ ಮುನ್ನಚ್ಚರಿಕೆ ವಹಿಸಿತ್ತು. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ವತಃ ಎಸ್ಪಿ ಎನ್.ಯತೀಶ್ ಭದ್ರತೆ ಉಸ್ತುವಾರಿಯನ್ನು ವಹಿಸಿಕೊಂಡು ಯಾತ್ರೆ ಸುಗಮವಾಗಿ ನಡೆಸಲು ಯಶಸ್ವಿಯಾದರು.

ಹಿಂದೂ ಜಾಗರಣ ವೇದಿಕೆಯ ಮುಖಂಡ ಕೆ.ಪಿ.ಉಲ್ಲಾಸ್, ಕೇಶವ್, ಡಾ.ಭಾನುಪ್ರಕಾಶ್ ಶರ್ಮ, ಚಂದನ್, ಕೆ.ಟಿ.ಬಾಲಚಂದರ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಫೈಟರ್ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಯೋಗೇಶ್, ಇತರ ಮುಖಂಡರು ಯಾತ್ರೆಯಲ್ಲಿ ಉಪಸ್ಥಿತರಿದ್ದರು.

"ಶ್ರೀರಂಗಪಟ್ಟಣದಲ್ಲಿ ರವಿವಾರ ನಡೆದ ಹನುಮ ಮಾಲಾಧಾರಿಗಳ ಯಾತ್ರೆ ವೇಳೆ ಓರ್ವ, ಜಾಮಿಯಾ ಮಸೀದಿ ಪ್ರವೇಶಿಸಿಸಲು ಯತ್ನಿಸಿದ್ದನ್ನು ಪೊಲೀಸರು ವಿಫಲಗೊಳಿಸಿದರು.  ಯಾತ್ರೆ ಶಾಂತಿಯುತವಾಗಿ ನಡೆಯಲು ಮುಂಜಾಗ್ರತೆ
ವಹಿಸಲಾಗಿತ್ತು."

-ಪ್ರವೀಣ್ ಮಧುಕರ್ ಪವಾರ್, ಐಜಿಪಿ ದಕ್ಷಿಣ ವಲಯ, ಮೈಸೂರು.
 

Similar News