ಚುನಾವಣೆಗಾಗಿ ಮೋದಿಜಿ ವಿಶೇಷ ಮದ್ಯ ವ್ಯವಸ್ಥೆ ಮಾಡಿದ್ದಾರೆಯೇ? : ಕಾಂಗ್ರೆಸ್ ಪ್ರಶ್ನೆ
ಗುಜರಾತ್,ಡಿ.6: ಗುಜರಾತ್ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಸೋಮವಾರ ನಡೆದಿದ್ದು, ಬಿಜೆಪಿ ಜಿಲ್ಲಾ ಅಧ್ಯಕ್ಷರು ಮದ್ಯದ ಬಾಟಲಿಗಳನ್ನು ಕಾರಿನಲ್ಲಿ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೇಸ್ ಚುನಾವಣೆಗಾಗಿ ಮೋದಿಜಿ ವಿಶೇಷ ಮದ್ಯ ವ್ಯವಸ್ಥೆ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಗುಜರಾತಿನಲ್ಲಿ ಸಂಪೂರ್ಣ ಮದ್ಯ ನಿಷೇಧವಿದೆ (ಕಾಗದದ ಮೇಲೆ ಮಾತ್ರ!) ಆದರೆ ಚುನಾವಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ತನ್ನದೇ ಕಾರಿನಲ್ಲಿ ಮದ್ಯ ತುಂಬಿಕೊಂಡು ರಾಜಾರೋಷವಾಗಿ ಮತದಾರರಿಗೆ ಹಂಚಲು ತೆರಳಿದ್ದಾನೆ. ಮದ್ಯ ನಿಷೇಧವಿದ್ದರೂ ಆತನಿಗೆ ಮದ್ಯ ಸಿಕ್ಕಿದ್ದು ಹೇಗೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಗುಜರಾತಿನಲ್ಲಿ ಸಂಪೂರ್ಣ ಮದ್ಯ ನಿಷೇಧವಿದೆ (ಕಾಗದದ ಮೇಲೆ ಮಾತ್ರ!)
— Karnataka Congress (@INCKarnataka) December 6, 2022
ಆದರೆ
ಚುನಾವಣೆಗಾಗಿ ಬಿಜೆಪಿಯ ಜಿಲ್ಲಾಧ್ಯಕ್ಷ ತನ್ನದೇ ಕಾರಿನಲ್ಲಿ ಮದ್ಯ ತುಂಬಿಕೊಂಡು ರಾಜಾರೋಷವಾಗಿ ಮತದಾರರಿಗೆ ಹಂಚಲು ತೆರಳಿದ್ದಾನೆ.
ಮದ್ಯ ನಿಷೇಧವಿದ್ದರೂ ಆತನಿಗೆ ಮದ್ಯ ಸಿಕ್ಕಿದ್ದು ಹೇಗೆ? ಚುನಾವಣೆಗಾಗಿ ವಿಶೇಷ ಮದ್ಯ ವ್ಯವಸ್ಥೆ ಮಾಡಿದ್ದಾರೆಯೇ ಮೋದಿಜಿ? pic.twitter.com/YBQchj7J5i