ಬೊಮ್ಮಾಯುಲ್ಲಾ ಖಾನ್, ಗಡ್ಕರಿ ಶೇಖ್...: ಸಿದ್ದರಾಮಯ್ಯ ಬಗ್ಗೆ ಸಿಟಿ ರವಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ಹೀಗಿದೆ...

Update: 2022-12-06 14:20 GMT

ಬೆಂಗಳೂರು: ' ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್‌ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತವೆ' ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ತೀವ್ರ ವಿರೊಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದೆ.

ಈ ವಿಚಾರವಾಗಿ ಮಂಗಳವಾರ ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಟೋಪಿ ಧರಿಸಿರುವ ಪೋಟೊ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರು ಟಿಪ್ಪು ಸಲ್ತಾನ್ ಅವರ ಪೇಟ ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡಿದೆ. 

ಫೋಟೊ ಜೊತೆಗೆ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್, "ಇವರನ್ನು "ಬೊಮ್ಮಾಯುಲ್ಲಾ ಖಾನ್" (ಬಸವರಾಜ ಬೊಮ್ಮಾಯಿ) ಎಂದು ಕರೆಯಬಹುದೇ?,  ಇವರಿಗೆ ಮಹಮದ್ ಗಡ್ಕರಿ ಶೇಕ್ ( ನಿತಿನ್ ಗಡ್ಕರಿ) ಎಂದು ಮರುನಾಮಕರಣ ಮಾಡುವಿರಾ? ಇವರಿಗೆ "ಜಬ್ಬಾರ್ ಖಾನ್" (ಜಗದೀಶ್ ಶೆಟ್ಟರ್) "ಅಶ್ವಾಖ್ ಇನಾಯತ್ ಖಾನ್" ( ಆರ್. ಅಶೋಕ್) ಎಂದು ಹೆಸರಿಡುತ್ತೀರಾ?'' ಎಂದು ಪ್ರಶ್ನಿಸಿ ಬಿಜೆಪಿ(@BJP4Karnataka)  ಮತ್ತು (CTRavi_BJP) ಅವರನ್ನು ಟ್ಯಾಗ್ ಮಾಡಿದೆ. 

Similar News