ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಅನುದಾನ ನೀಡಿದ ಇನ್ಪೋಸಿಸ್‍ನ ಸುಧಾಮೂರ್ತಿ ಒಡೆತನದ ಮೂರ್ತಿ ಟ್ರಸ್ಟ್

Update: 2022-12-09 18:24 GMT

ಬೆಂಗಳೂರು, ಡಿ.9: ಇನ್ಪೋಸಿಸ್‍ನ ಸುಧಾಮೂರ್ತಿ ಒಡೆತನದ ಮೂರ್ತಿ ಟ್ರಸ್ಟ್ ವತಿಯಿಂದ ಪುರಾತನವಾದ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಅಧ್ಯಯನವನ್ನು ಉತ್ತೇಜಿಸಲು ಪುಣೆಯ ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ಗೆ 75 ದಶಲಕ್ಷ ರೂಪಾಯಿ ಅನುದಾನವನ್ನು ನೀಡಲಾಗಿದೆ. 

ಈ ಅನುದಾನದಿಂದ ಇನ್‍ಸ್ಟಿಟ್ಯೂಟ್ ಆವರಣದಲ್ಲಿ ‘ಮೂರ್ತಿ ಸೆಂಟರ್ ಆಫ್ ಇಂಡಿಕ್ ಸ್ಟಡೀಸ್’ ಎಂಬ ಸಂಶೋಧನಾ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಾಕೃತ ಭಾಷೆಯ ಪ್ರಾಚೀನ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಲು ಆಡಿಯೊ-ವಿಶುವಲ್ ಸ್ಟುಡಿಯೊವನ್ನು ಕಟ್ಟಡದಲ್ಲಿ ನಿರ್ಮಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. 

Similar News