PSI ಹಗರಣ: ಪ್ರಮುಖ ಆರೋಪಿಗಳಾದ 'ಆರ್‌ಡಿಪಿ' ಸಹೋದರರಿಗೆ ಜಾಮೀನು

Update: 2022-12-15 15:11 GMT

ಕಲಬುರಗಿ, ಡಿ. 15: ಪೊಲೀಸ್ ಸಬ್ ಇನ್ಸ್‍ಪೆಕ್ಟರ್(ಪಿಎಸ್ಸೈ) ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ಎನ್ನಲಾದ ಆರ್.ಡಿ.ಪಾಟೀಲ್ ಹಾಗೂ ಮಹಾಂತೇಶ ಪಾಟೀಲ್ ಸಹೋದರರಿಗೆ 8 ತಿಂಗಳ ನಂತರ ಹೈಕೋರ್ಟ್ ಜಾಮೀನು ನೀಡಿದೆ. 

ಕಲಬುರಗಿಯ ಚೌಕ್  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಡಿಪಿ ಸಹೋದರರಿಗೆ ಕಲಬುರಗಿ ಹೈಕೋರ್ಟ್ ನ್ಯಾಯಪೀಠ, ಜಾಮೀನು ಮಂಜೂರು ಮಾಡಿದ್ದಾರೆ. 

ಪರೀಕ್ಷೆ ಅಕ್ರಮ ಬಯಲಾದ ದಿನದಿಂದ ನ್ಯಾಯಾಂಗ ಬಂಧನದಲ್ಲಿದ್ದ ಮಹಾಂತೇಶ ಪಾಟೀಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಆರ್.ಡಿ.ಪಾಟೀಲ್ ವಿರುದ್ಧ ಬೇರೆ ಠಾಣೆಗಳಲ್ಲಿಯೂ ಪ್ರಕರಣಗಳಿದ್ದು ಬಿಡುಗಡೆಯಾಗಿಲ್ಲ.

ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕಳೆದ ಎ.22 ರಂದು ಅಫಜಲಪುರನಲ್ಲಿ ಮಹಾಂತೇಶ ಪಾಟೀಲ್‍ನನ್ನು ಬಂಧಿಸಿದ್ದರು. ಆರ್.ಡಿ.ಪಾಟೀಲ್‍ರನ್ನು ಎ.23ರಂದು ಮಹಾರಾಷ್ಟ್ರದಲ್ಲಿ ಬಂಧಿಸಿ, ಕಲಬುರಗಿಗೆ ಕರೆತರಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. 

Similar News