ಮುದ್ದೇಬಿಹಾಳ: ಆಟವಾಡುತ್ತಿದ್ದಾಗ ನೀರಿನ ಟ್ಯಾಂಕ್ ಗೆ ಬಿದ್ದು ಬಾಲಕ ಸಾವು
Update: 2022-12-16 06:26 GMT
ಮುದ್ದೇಬಿಹಾಳ: ನೀರು ಸಂಗ್ರಹಿಸುವ ಟ್ಯಾಂಕ್ ನೊಳಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶ್ರೇಯಸ್ ಆನಂದ ನಿಡೋಣಿ (5) ಮೃತ ಬಾಲಕ ಎಂದು ಗುರುತಿಸಲಾಗಿದೆ. ತಾಲೂಕು ಆಡಳಿತ ಸೌಧ ಹಿಂಭಾಗದಲ್ಲಿರುವ ಕುಂಚಗನೂರ ದೇಸಾಯಿ ಕಟ್ಟಡದಲ್ಲಿ ಘಟನೆ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಟ್ಯಾಂಕ್‌ನೊಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ..
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.