ಇನ್ನೂ ಯಾಕೆ ಬಿಜೆಪಿಯಲ್ಲಿದ್ದೀರಿ?: ಎಚ್.ವಿಶ್ವನಾಥ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Update: 2022-12-17 13:08 GMT

ಮೈಸೂರು: ಎಚ್.ವಿಶ್ವನಾಥ್ ಅವರೇ ನಿಮಗೆ ಬಿಜೆಪಿ ತತ್ವ ಸಿದ್ಧಾಂತಗಳು ಪಥ್ಯ ಆಗಲಿಲ್ಲ ಎಂದರೆ ಯಾಕೆ ಬಿಜೆಪಿಯಲ್ಲಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ಎಚ್.ವಿಶ್ವನಾಥ್ ಅವರ ಕಿತ್ತಾಟದ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರು ಬೇರೆ ಕಡೆ ಹೋಗಬಹುದಲ್ಲ ಎಂದು ಸಲಹೆ ನೀಡಿದರು.

ಪಕ್ಷದಲ್ಲಿದ್ದುಕೊಂಡು ಅವರಿವರನ್ನು ಯಾಕೆ ಪ್ರತಿ ದಿನ ಚುಚ್ಚೋದು, ತಿವಿಯೋದು ಮಾಡುತ್ತೀರ? ಈಗಾಗಲೇ ಜನ ಬೇಸತ್ತು ನಿಮಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.ಆದರೂ ನೀವು ಬುದ್ದಿ ಕಲಿಯುತ್ತಿಲ್ಲ ಎಂದು ಕಿಡಿಕಾರಿದರು.

ಸಂಸದ ವಿ.ಶ್ರೀನಿವಾಸ ಪ್ರಸಾದ್ ಮೈಸೂರು ಭಾಗದಲ್ಲಿ ಒಬ್ಬ ಪ್ರಶ್ನಾತೀತ ನಾಯಕ ಅವರ ಬಗ್ಗೆ ನಮಗೆ ತುಂಬಾ ಗೌರವ ಇದೆ. ಸಾರ್ವಜನಿಕ ವಲಯದಲ್ಲಿ ಅವರು ಏನೆ ಮಾತನಾಡಿದರು ತೂಕ ಇರುತ್ತದೆ. ಅವರ ಬಗ್ಗೆ ಯಾರು ಏನೇ ಮಾತನಾಡಿದರು ನನಗೆ ವೈಯಕ್ತಿಕವಾಗಿ ನೋವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ರಾಮನಗರ JDS ಅಭ್ಯರ್ಥಿ: ಶಾಸಕಿ ಅನಿತಾ ಘೋಷಣೆ

Similar News