ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಿಂಪಡೆಯುವ ಪ್ರಕ್ರಿಯೆಗೆ ಸ್ಪೀಕರ್ ಕಾಗೇರಿ ತಡೆ
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.20: 2021ನೆ ಸಾಲಿನ ಬಂಧಿಗಳ ಗುರುತಿಸುವಿಕೆ(ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಹಿಂಪಡೆಯುವ ಪ್ರಕ್ರಿಯೆಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ನೀಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಗೃಹ ಸಚಿವಆರಗಜ್ಞಾನೇಂದ್ರ ಈ ವಿಧೇಯಕವನ್ನು ಹಿಂಪಡೆಯಲು ಪ್ರಸ್ತಾಪಿಸಿದ ವಿಷಯದಕುರಿತುಕಾಂಗ್ರೆಸ್ ಸದಸ್ಯರಾದಕೆ.ಆರ್.ರಮೇಶ್‍ಕುಮಾರ್ ಹಾಗೂ ಎಚ್.ಕೆ.ಪಾಟೀಲ್ ವಿಧೇಯಕ ಹಿಂಪಡೆಯಲು ತಾಂತ್ರಿಕ ಅಂಶಗಳನ್ನು ಮುಂದಿಟ್ಟರು.
ರಾಜ್ಯದಲ್ಲಿ ಈ ವಿಧೇಯಕವನ್ನು ಅನುಮೋದಿಸಿ ರಾಷ್ಟ್ರಪತಿಯಿಂದಅಂಕಿತ ಪಡೆಯಲು ಕಳುಹಿಸಿಕೊಟ್ಟ ಸಂದರ್ಭದಲ್ಲಿಕೇಂದ್ರ ಸರಕಾರವು ದಿ ಐಡೆಂಟಿಫಿಕೇಷನ್‍ಆಫ್ ಪ್ರಿಸನರ್ಸ್ ಕಾಯ್ದೆಯನ್ನು ಜಾರಿಗೆ ತಂದಿದ್ದರಿಂದ ಈ ವಿಧೇಯಕವನ್ನು ನಿರಶನಗೊಳಿಸಲಾಯಿತು. ಆದುದರಿಂದ, ಈ ವಿಧೇಯಕವನ್ನು ಹಿಂಪಡೆಯಲಾಗುತ್ತಿದೆ ಎಂದು ಆರಗಜ್ಞಾನೇಂದ್ರ ಹೇಳಿದರು.
ಆದರೆ, ಕಾಂಗ್ರೆಸ್ ಹಿರಿಯ ಸದಸ್ಯರು ಈ ಸಂಬಂಧ ಕೆಲವು ತಾಂತ್ರಿಕ ವಿಷಯಗಳನ್ನು ಮುಂದಿಟ್ಟಿದ್ದರಿಂದ, ಸ್ಪೀಕರ್ ಈ ವಿಧೇಯಕವನ್ನು ಹಿಂಪಡೆಯುವ ಪ್ರಕ್ರಿಯೆಗೆ ಸದ್ಯತಡೆ ಹಿಡಿಯುತ್ತಿದ್ದು, ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ನಂತರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಿಧೇಯಕದಲ್ಲಿಏನಿತ್ತು?: ಆರೋಪಿಯ ಡಿಎನ್‍ಎ, ಧ್ವನಿ ಪರೀಕ್ಷೆ, ಕಣ್ಣಿನ ಮಾದರಿ ಸಂಗ್ರಹ ಮಾಡಲು ಅನುಮತಿ ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್ ಅವರಿಗೆ ಮಾತ್ರಇತ್ತು. ಅದನ್ನು ಎಸ್ಪಿ ಅವರಿಗೂ ಅಧಿಕಾರ ನೀಡುವ ತಿದ್ದುಪಡಿ ತರಲಾಗಿತ್ತು.