ನಿರಾಣಿ ಪೇಮೆಂಟ್‌ ಮಂತ್ರಿ ಎಂದ ಯತ್ನಾಳ್‌; ಯಾರಿಗೆ? ಎಷ್ಟು ಹಣ ನೀಡಿದ್ದಾರೆ? ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2022-12-21 07:22 GMT

ಬೆಂಗಳೂರು, ಡಿ.20: ಬೃಹತ್ ಮತ್ತು ಮಧ್ಯಮಕೈಗಾರಿಕಾ ಸಚಿವ ಮುರುಗೇಶ್‍ ಆರ್.ನಿರಾಣಿ  ಅವರನ್ನು  ಪೇಮೆಂಟ್ ಕೋಟಾದಲ್ಲಿ ಮಂತ್ರಿಯಾದವರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, 'ನಿರಾಣಿಯವರು #PayCM ಮಾಡಿದಾರಾ?'  ಎಂದು ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, " ನಿರಾಣಿಯವರು #PayCM ಮಾಡಿದಾರಾ? #PayPM ಮಾಡಿದಾರಾ? ಯಾರಿಗೆ? ಎಷ್ಟು ಹಣ ನೀಡಿದ್ದಾರೆ? ಬಿಜೆಪಿಯಲ್ಲಿ ಎಲ್ಲವೂ ಪೇಮೆಂಟ್ ಆಧಾರದಲ್ಲಿಯೇ ನಡೆಯುತ್ತಿರುವುದು ಎಂಬುದು ಇತ್ತೀಚಿನ #BJPvsBJP ಕಿತ್ತಾಟದಲ್ಲಿ ಹೊರಬರುತ್ತಿದೆ. ಆದರೆ ತನಿಖೆ ಮಾತ್ರ ಇಲ್ಲವೇಕೆ?' ಎಂದು ಪ್ರಶ್ನೆ ಮಾಡಿದೆ.

ಮುರುಗೇಶ್ ನಿರಾಣಿ ಪೇಮೆಂಟ್ ನೀಡಿ ಸಚಿವರಾದವರು ಎನ್ನುವ ಮೂಲಕ ಬಿಜೆಪಿಯ ಸಚಿವ ಸ್ಥಾನದ ಮಾರಾಟವನ್ನು ಯತ್ನಾಳ್ ತಿಳಿಸಿದ್ದಾರೆ. ಆ ಹಣ ಪಡೆದವರು ಯಾರು ಎಂಬುದನ್ನ ಬಿಜೆಪಿ ಉತ್ತರಿಸಬೇಕು. ಸಿಎಂ ಬೊಮ್ಮಾಯಿ ಅವರಾ?, ನರೇದ್ರ ಮೋದಿಅವರಾ? ಅಮಿತ್ ಷಾ ಅವರಾ? ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಾ? ಎಂದು ಕಾಂಗ್ರೆಸ್ ಕಿಡಿಕಾರಿದೆ. 

Full View

Similar News