ವಿಜಯಪುರ: ಗೋಳಗುಮ್ಮಟದ ಒಳಗಿನ ಮಹಡಿಯಿಂದ ಹಾರಿ ಯುವತಿ ಆತ್ಮಹತ್ಯೆ
Update: 2022-12-21 14:37 GMT
ವಿಜಯಪುರ, ಡಿ.20: ಗೋಳಗುಮ್ಮಟ (Gol Gumbaz) ಒಳಗಿನ ಗ್ಯಾಲರಿ ಮೇಲಿಂದ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ನಗರದ ಗೋಳಗುಮ್ಮಟ ಆವರಣದಲ್ಲಿ ಬುಧವಾರ ಸಂಜೆ ನಡೆದಿದೆ.
ಬೆಂಗಳೂರು ಮೂಲದ ಸೌಂದರ್ಯ (19) ಆತ್ಮಹತ್ಯೆ ಮಾಡಿ ಕೊಂಡ ಯುವತಿ ಎಂದು ಗುರುತಿಸಲಾಗಿದೆ.
ಆತ್ಮಹತ್ಯೆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.