ಮಡಿಕೇರಿ: ದೊಣ್ಣೆಯಿಂದ ಹಲ್ಲೆ ನಡೆಸಿ ಪತಿಯ ಹತ್ಯೆ; ಆರೋಪಿ ಪತ್ನಿಯ ಬಂಧನ
Update: 2022-12-23 17:25 GMT
ಮಡಿಕೇರಿ, ಡಿ.23: ಪತಿ ಪತ್ನಿಯ ನಡುವಿನ ಜಗಳದಲ್ಲಿ ಪತಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕಾಕೋಟುಪರಂಬು ಗ್ರಾ.ಪಂ ವ್ಯಾಪ್ತಿಯ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ.
ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಹೆಚ್.ಬಿ.ಸುಂದರ(48) ಮೃತ ವ್ಯಕ್ತಿಯಾಗಿದ್ದು, ಕೊಲೆ ಆರೋಪದಡಿ ಪತ್ನಿ ಶೋಭಾಳನ್ನು ಬಂಧಿಸಲಾಗಿದೆ.
ಮದ್ಯ ಸೇವಿಸಿ ಮನೆಗೆ ಬಂದ ಸುಂದರ ಜಗಳ ಮಾಡಿದನೆಂದು ಪತ್ನಿ ಶೋಭಾ ದೊಣ್ಣೆಯಿಂದ ಹಲ್ಲೆ ಮಾಡಿ, ತನ್ನ ವೇಲ್ ನಿಂದ ಕುತ್ತಿಗೆ ಬಿಗಿದಿದ್ದಾಳೆ. ಈ ವೇಳೆ ಸುಂದರ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ವಿರಾಜಪೇಟೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಶೋಭಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.