ಬಾಗಲಕೋಟೆ: ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

Update: 2023-06-27 10:51 GMT

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮ ಬಳಿಯ ಘಟಪ್ರಭಾ ನದಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

ಮೃತರನ್ನ ಸೂಳೆಬಾವಿ ಗ್ರಾಮದ ಉಮಾ ಮಾಸರೆಡ್ಡಿ (42) ಹಾಗೂ ಪುತ್ರಿಯರಾದ ಐಶ್ವರ್ಯ(20), ಸೌಂದರ್ಯ(18) ಎಂದು ಗುರುತಿಸಲಾಗಿದೆ. 

ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಕಮತಗಿ ಬಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಮಲಪ್ರಭಾ ಸೇತುವೆ ಬಳಿ ಮೂವರ ಮೃತ ದೇಹ ಪತ್ತೆಯಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮಲಪ್ರಭಾ ನದಿಯಿಂದ ಶವಗಳನ್ನು ಹೊರತೆಗೆದರು. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿಸುವುದಾಗಿ ಹೇಳಿ ವಂಚನೆ, ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಆರೋಪಿ ಸಂಘಪರಿವಾರದ ಕಾರ್ಯಕರ್ತನ ಬಂಧನ

Similar News