ನಮ್ಮ ತಾಂಡಕ್ಕೆ BJP ಮುಖಂಡರಿಗೆ ಪ್ರವೇಶವಿಲ್ಲ: ಬಾಗಲಕೋಟೆಯ ಹಲವೆಡೆ ಫಲಕಗಳ ಅಳವಡಿಕೆಗೆ ತೀರ್ಮಾನ
ಮನೆ, ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜಗಳ ತೆರವು
ಬಾಗಲಕೋಟೆ: ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರವನ್ನು ವಿರೋಧಿಸಿ ಶಿಕಾರಿಪುರದಲ್ಲಿ ಭುಗಿಲೆದ್ದ ಆಕ್ರೋಶ ಇದೀಗ ಬಾಗಲಕೋಟೆ ಜಿಲ್ಲೆಗೂ ಹಬ್ಬಿದೆ.
ನಮ್ಮ ತಾಂಡಕ್ಕೆ ಬಿಜೆಪಿ ರಾಜಕೀಯ ಮುಖಂಡರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬ ಫಲಕಗಳ ಅಳವಡಿಕೆಗೆ 'ಬಾಗಲಕೋಟೆ ಬಂಜಾರ ಸೇವಾ ಸಂಘ' ನಿರ್ಧಿರಿಸಿವೆ.
2023ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಲು ಆಗ್ರಹಿಸಿಲಾಗಿದೆ. ಅಲ್ಲದೇ, ಫಲಕದಲ್ಲಿ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಕೂಡ ಬರೆಯಲಾಗಿದೆ.
ಬಾಗಲಕೋಟೆ ಜಿಲ್ಲೆ ಮತ್ತು ತಾಲೂಕಿನ ಮಚಖಂಡಿ ತಾಂಡದಲ್ಲಿ ಪ್ರತಿಭಟನೆ ನಡೆಸಿದ್ದು, ಈ ಫಲಕದ ಬ್ಯಾನರ್ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲಿಯೇ ಸುತ್ತಮುತ್ತಲ ತಾಂಡಗಳಲ್ಲಿಯೂ ಇದೇ ರೀತಿಯ ಫಲಕಗಳನ್ನು ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಬಿಜೆಪಿ ಧ್ವಜಗಳ ತೆರವು
ಮುಚಖಂಡಿ ತಾಂಡಾದಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜಗಳನ್ನ ತೆರವು ಮಾಡಿರುವ ಸಮುದಾಯದ ಯುವಕರು ಬಿಜೆಪಿಯನ್ನ ತಮ್ಮ ತಾಂಡಾದೊಳಗೆ ಬರಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ; ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಕಾಲಿಟ್ಟ ಒಳ ಮೀಸಲಾತಿ ಕಿಚ್ಚು