ಬಾಗಲಕೋಟೆ | 'ದಿ ಕೇರಳ ಸ್ಟೋರಿ' ವೀಕ್ಷಣೆಗೆ ಕಾಲೇಜಿಗೆ ಅರ್ಧ ದಿನ ರಜೆ ನೀಡಿದ್ದ ವಿವಾದ: ಕ್ಷಮೆಯಾಚಿಸಿದ ಪ್ರಾಂಶುಪಾಲರು

Update: 2023-06-27 10:49 GMT

ಬಾಗಲಕೋಟೆ, ಮೇ 25: ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಣೆಗೆ ಜಿಲ್ಲೆಯ ಇಳಕಲ್‍ನ ಮಹಾಂತೇಶ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಚಾರ್ಯರು ಮೇ 24ರಂದು ಕಾಲೇಜಿಗೆ ಅರ್ಧದಿನ ರಜೆ ಕೊಟ್ಟು ಸೂಚಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ, ರಜೆ ರದ್ದುಪಡಿಸಿ ಕ್ಷಮಾಪಣೆ ಕೋರಿದ್ದಾರೆ.

ಇಳಕಲ್ ನಗರದ ಶ್ರೀನಿವಾಸ ಚಿತ್ರ ಮಂದಿರದಲ್ಲಿ ಮೇ 24ರ ಮಧ್ಯಾಹ್ನ 12ರಿಂದ 3ರ ವರೆಗೆ ‘ದಿ ಕೇರಳ ಸ್ಟೋರಿ' ಚಿತ್ರದ ಉಚಿತ ಪ್ರದರ್ಶನ ವಿದ್ಯಾರ್ಥಿನಿಯರು ಹೋಗಿ ಚಿತ್ರ ವೀಕ್ಷಿಸಬೇಕು. ಅದಕ್ಕಾಗಿ ಮಧ್ಯಾಹ್ನದ ಅವಧಿಯ ತರಗತಿಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಕೆ.ಸಿ.ದಾಸ್ ನೀಡಿದ್ದ ಸೂಚನಾ ಪತ್ರವವನ್ನು ಕಾಲೇಜಿನ ಫಲಕದಲ್ಲಿ ಅಂಟಿಸಲಾಗಿತ್ತು.

ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದ (ಎಸ್‍ಐಒ) ಇಳಕಲ್ ಘಟಕದ ಅಧ್ಯಕ್ಷ ಆಸೀಫ್ ಹುಣಚಗಿ ಕಾಲೇಜಿಗೆ ತೆರಳಿ ಪ್ರಾಚಾರ್ಯರ ಕ್ರಮವನ್ನು ಖಂಡಿಸಿದ್ದರು. ಅಲ್ಲದೆ, ಮೇಲ್ಕಂಡ ಚಿತ್ರವು ಒಂದು ನಿರ್ದಿಷ್ಟ ಸಮುದಾಯದ ಬಗ್ಗೆ ಸುಳ್ಳು ಮಾಹಿತಿ ನೀಡುವ ಹಾಗೂ ದ್ವೇಷ ಹರಡುವ ದುರುದ್ದೇಶದಿಂದ ಕೂಡಿದೆ. ಹೀಗಾಗಿ ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಎಂಬ ಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಈ ಮಧ್ಯೆ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಅವರ ಗಮನಕ್ಕೂ ತಂದರು. ಆ ಹಿನ್ನೆಲೆಯಲ್ಲಿ ಪ್ರಾಚಾರ್ಯರು ಕೂಡಲೇ ನೋಟಿಸ್ ಹಿಂಪಡೆದಿದ್ದು, ತರಗತಿಗಳನ್ನು ರದ್ದುಪಡಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. 

Similar News