‘ನಾಳೆ ಸ್ವಾತಂತ್ರ್ಯೋತ್ಸವ’ ಎಂದ ಅಶೋಕ್!

Update: 2023-01-25 17:00 GMT

ಮಂಡ್ಯ, ಜ.25: ‘ನಾಳೆ ಸ್ವಾತಂತ್ರ್ಯೋತ್ಸವ ಇದೆ. ಏನಿದ್ದರೂ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿ, ಉಳಿದ ವಿಚಾರಗಳನ್ನು ನಾಳೆ ಕಾರ್ಯಕ್ರಮದ ನಂತರ ಕೇಳಿ’ ಎಂದು ಕಂದಾಯ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

'ಮಂಡ್ಯ ತಹಶೀಲ್ದಾರ್ ಅವರು ಸರಕಾರಿ ಜಾಗವನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಈ ಸಂಬಂಧ ಆರ್‍ಟಿಐ ಕಾರ್ಯತರ್ಕ ಕೆ.ಆರ್.ರವೀಂದ್ರ ನಿಮಗೆ ದೂರು ನೀಡಿದ್ದಾರೆ. ಜತೆಗೆ ಇನ್ನೂ ಸಾಕಷ್ಟು ದೂರುಗಳಿವೆ. ಈ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ?' ಎಂಬ ಪ್ರಶ್ನೆಗೆ ಅಶೋಕ್ ಮೇಲಿನಂತೆ ಉತ್ತರಿಸಿದ್ದಾರೆ. 

ಒಂದಲ್ಲ ಎರಡು ಬಾರಿ ಸ್ವಾತಂತ್ರ್ಯೋತ್ಸವ ಎಂದು ಸಚಿವರು ಹೇಳಿದರೂ ಅವರ ಜತೆಯಲ್ಲಿದ್ದ ಪಕ್ಷದ ಜಿಲ್ಲೆಯ ಮುಖಂಡರು ಸಚಿವರು ತಪ್ಪಾಗಿ ಹೇಳುತ್ತಿರುವುದನ್ನು ಸರಿಪಡಿಸುವ ಪ್ರಯತ್ನ ಮಾಡಲಿಲ್ಲ. ಸಚಿವರಿಗೂ ತಾನು ತಪ್ಪಾಗಿ ಹೇಳಿದ್ದೇನೆ ಎಂಬುದು ಅರಿವಾಗಲೇ ಇಲ್ಲ. 

'ಮಂಡ್ಯ ಜಿಲ್ಲೆಯಲ್ಲಿ 7 ಕ್ಷೇತ್ರಗಳ ಜನತೆ ಹತ್ತಾರು ವರ್ಷಗಳಿಂದ ಎರಡು ಪಕ್ಷಗಳನ್ನು ನೋಡಿ ಭ್ರಮನಿರಸನಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿರುವಂತೆ ಎರಡೂ ಪಕ್ಷಗಳನ್ನು ಜನತೆ ತೊಳೆದು ಕಳಿಸುತ್ತಾರೆ' 

- ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು


ಇದನ್ನೂ ಓದಿ: 90ರಿಂದ 110 ಸಿಡಿಗಳು ಸಿಕ್ಕಿವೆ, ಸಿಬಿಐ ತನಿಖೆಗೆ ಕೊಡಿ...: ರಮೇಶ್​ ಜಾರಕಿಹೊಳಿ

Similar News