ವಾಟ್ಸ್‌ಆ್ಯಪ್ ಹೊಸ ಫೀಚರ್ ಹೇಗಿದೆ? ಇಲ್ಲಿದೆ ಮಾಹಿತಿ

ತಾಂತ್ರಿ‘ಕತೆ’

Update: 2023-01-28 10:04 GMT

► ವಾಟ್ಸ್‌ಆ್ಯಪ್ ಹೊಸ ಫೀಚರ್ ಹೇಗಿದೆ? ಇಲ್ಲಿದೆ ಮಾಹಿತಿ

ವಾಟ್ಸ್‌ಆ್ಯಪ್ ಬಿಡುಗಡೆ ಮಾಡಿರುವ ಸ್ಟೇಟಸ್ ಅಪ್‌ಡೇಟ್ ಪ್ರಕಾರ, ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಮೆಸೇಜ್ ಸಹ ಶೇರ್ ಮಾಡಬಹುದು. ಸ್ವಲ್ಪ ದಿನಗಳ ಹಿಂದೆ ಮೆಸೇಜ್ ಎಡಿಟ್ ಮಾಡುವ ಫೀಚರ್, ವೀಡಿಯೊ ಕಾಲ್ ಫೀಚರ್ಸ್ ಅನ್ನು ಬಿಡುಗಡೆ ಮಾಡಿತ್ತು. ಈ ಮಧ್ಯೆ ವಾಟ್ಸ್‌ಆ್ಯಪ್ ಸದ್ಯ ಸ್ಟೇಟಸ್ ವಿಭಾಗದಲ್ಲಿ ಮಹತ್ತರಾದ ಫೀಚರ್ ಒಂದನ್ನು ಪರಿಚಯಿಸಿದೆ. ಈ ಅಪ್‌ಡೇಟ್ ವಾಯ್ಸ ನೋಟ್ ಫೀಚರ್ ಆಗಿದ್ದು, ಇನ್ಮುಂದೆ ವಾಟ್ಸ್‌ಆ್ಯಪ್ ನಲ್ಲಿ ಫೋಟೊ, ವೀಡಿಯೊ ಜೊತೆಗೆ ವಾಯ್ಸ್ ನೋಟ್ ಸಹ ಶೇರ್ ಮಾಡಿ ಕೊಳ್ಳಬಹುದಾಗಿದೆ. ಶೇರ್ ಮಾಡು ವಂತಹ ರೀತಿ ಈ ಹಿಂದೆ ಮಾಡುತ್ತಿದ್ದಂತಹ ರೀತಿಯಲ್ಲೇ ಇರಲಿದ್ದು, ಈ ಫೀಚರ್ ಮಾತ್ರ ವಿಭಿನ್ನ ಅನುಭವವನ್ನು ನೀಡಲಿದೆ.

ಇನ್ನು ಈ ವಾಯ್ಸ ನೋಟ್ ಫೀಚರ್ ಅನ್ನು ಸ್ಟೇಟಸ್‌ನಲ್ಲಿ ಒಂದು ಬಾರಿ 30 ಸೆಕೆಂಡ್‌ವರೆಗೆ ರೆಕಾರ್ಡ್ ಮಾಡಿ ಶೇರ್ ಮಾಡಬಹುದಾಗಿದೆ. ಜೊತೆಗೆ ಯಾವುದೇ ವಾಯ್ಸ ಮೆಸೇಜ್ ಅನ್ನು ಸಹ ಎನ್‌ಕ್ರಿಪ್ಟ್ ಮಾಡಲಾಗುತ್ತದೆ. ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿರುವ ಫೋಟೊ ಹಾಗೂ ವೀಡಿಯೊದಂತೆಯೇ 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಇದಿಷ್ಟೇ ಅಲ್ಲದೆ, ಸ್ಟೇಟಸ್ ಅಪ್‌ಡೇಟ್‌ನಲ್ಲಿ ಪೋಸ್ಟ್ ಮಾಡಿದ ನಂತರ ಬಳಕೆದಾರರು ಅದನ್ನು ಡಿಲೀಟ್ ಮಾಡುವ ಆಯ್ಕೆ ಸಹ ಇರಲಿದೆ.

ಈ ಫೀಚರ್ಸ್ ಬಗ್ಗೆ ವಾಬೀಟಾಇನ್ಫೋ ಮಾಹಿತಿ ನೀಡಿದ್ದು, ಹೊಸ ಫೀಚರ್ಸ್ ಪ್ರಸಕ್ತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆ್ಯಂಡ್ರಾಯ್ಡಾ 2.23.2.8 ನವೀಕರಣದಲ್ಲಿ ಇತ್ತೀಚಿನ ವಾಟ್ಸ್‌ಆ್ಯಪ್ ಬೀಟಾದೊಂದಿಗೆ ಲಭ್ಯವಿರಲಿದೆ ಎಂದು ಉಲ್ಲೇಖಿಸಿದೆ.

ಅದರಂತೆ ಆ್ಯಂಡ್ರಾಯ್ಡಾ ಬೀಟಾ ಪರೀಕ್ಷಕರು ವಾಯ್ಸಾ ನೋಟ್ ಅನ್ನು ಸ್ಟೇಟಸ್‌ನಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ. ಫೀಚರ್ಸ್ ಟೆಕ್ಸ್ಟ್ ಸ್ಟೇಟಸ್ ವಿಭಾಗದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಈ ವಾಯ್ಸ್ ಮೆಸೇಜ್ ಶೇರ್ ಮಾಡುವ ಮೊದಲು ಡಿಲೀಟ್ ಮಾಡುವ ಅವಕಾಶ ಸಹ ಲಭ್ಯವಿದೆ. ಈ ಹಿಂದೆ ವಾಟ್ಸ್‌ಆ್ಯಪ್ ನಲ್ಲಿ ಶೇರ್ ಮಾಡುವಾಗ ಯಾವುದೇ ಫೈಲ್‌ಗಳನ್ನು ಶೇರ್ ಮಾಡಬೇಕಾದರೆ ಅದಕ್ಕೆ ಟೈಟಲ್ ಹಾಕುವಂತಹ ಅವಕಾಶವಿರಲಿಲ್ಲ. ಆದರೆ ಇನ್ಮುಂದೆ ಶೇರ್ ಮಾಡುವ ಮೀಡಿಯಾ ಫೈಲ್ ಜೊತೆಗೆ ಟೈಟಲ್ ಹಾಕಿ ಶೇರ್ ಮಾಡಬಹುದಾಗಿದೆ. ಈ ಮೂಲಕ ಬಳಕೆದಾರರು ಯಾವುದೇ ಫೈಲ್‌ಗಳನ್ನು ವಾಟ್ಸ್‌ಆ್ಯಪ್ ನಲ್ಲಿ ಹುಡುಕಲು ಸಹಾಯವಾಗುತ್ತದೆ. ಟೈಟಲ್ ಸೇರಿಸಿದಾಗ ಅದು ಸ್ಕ್ರೀನ್‌ನ ಕೆಳಭಾಗದಲ್ಲಿ ಕಾಣಸಿಗುತ್ತದೆ.

► ಆ್ಯಪಲ್ ಕಂಪೆನಿಯ ಹೋಮ್‌ಪಾಡ್ 2ನೇ ಜೆನ್ ಸ್ಪೀಕರ್

ಆ್ಯಪಲ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ.ತನ್ನ ಬ್ರಾಂಡ್‌ನ ಹೊಸ ಫೀಚರ್ಸ್ ಐಫೋನ್ 14 ಸೀರಿಸ್‌ವರೆಗೆ ಮೊಬೈಲ್‌ಗಳನ್ನು ರಿಲೀಸ್ ಮಾಡಿದೆ. ಮಾರುಕಟ್ಟೆಗೆ ಲಗ್ಗೆ ಇಡಲು ಆ್ಯಪಲ್ ಕಂಪೆನಿ ಸಜ್ಜಾಗಿದ್ದು, ಐ ಫೋನ್ 15 ಸೀರಿಸ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ಆ್ಯಪಲ್ ಕಂಪೆನಿ ಹೊಸದೊಂದು ಆ್ಯಪಲ್ ಹೋಮ್‌ಪಾಡ್ ಸ್ಪೀಕರ್ ಲಾಂಚ್ ಮಾಡಿದೆ. ಈ ಸ್ಮಾರ್ಟ್ ಹೋಮ್ ಡಿವೈಸ್ ಈ ಬಾರಿ ಆ್ಯಪಲ್ ಕಂಪೆನಿಯಿಂದ ಬಿಡುಗಡೆಯಾದ ಹೊಸ ಸ್ಪೀಕರ್.

ಹೊಸ ಮ್ಯಾಕ್‌ಬುಕ್ ಪ್ರೋ ಲಾಂಚ್ ಮಾಡಿದ ಬಳಿಕ ಹೋಮ್‌ಪಾಡ್ 2ನೇ ಜೆನ್ ಸ್ಪೀಕರ್ ಲಾಂಚ್ ಮಾಡಿದೆ. ಇದು ಅತ್ಯುತ್ತಮ ಅನುಭವ ನೀಡುವ ಸ್ಪೀಕರ್ ಆಗಿದೆ. ಅಕೌಸ್ಟಿಕ್ಸ್ ಮತ್ತು ಐಕಾನಿಕ್ ವಿನ್ಯಾಸದೊಂದಿದೆ ಈ ಡಿವೈಸ್ ವಿನ್ಯಾಸ ಗೊಳಿಸಲಾಗಿದೆ. ಜೊತೆಗೆ ಈ ಸ್ಪೀಕರ್ ಸಿರಿ ಸಹ ಪಡೆದುಕೊಂಡಿದೆ. ಆಡಿಯೋ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಕಂಪ್ಯೂಟೇಶನಲ್ ಆಡಿಯೋ ಫಿಚರ್ಸ್ ಬಳಸಿಕೊಳ್ಳಲಾಗಿದೆ ಎಂದು ಆ್ಯಪಲ್ ಕಂಪೆನಿ ಹೇಳಿಕೊಂಡಿದೆ.

ಆ್ಯಪಲ್ ತನ್ನ ಸ್ಮಾರ್ಟ್ ಹೋಮ್ ಡಿವೈಸ್‌ಗಳ ಮೂಲಕ ನಡೆಯುವ ಯಾವುದೇ ಸಂವಹನವು ಪ್ರಾರಂಭದಿಂದ ಕೊನೆಯವರೆಗೂ ಎನ್‌ಕ್ರಿಪ್ಟ್ ಆಗಿರುತ್ತೆ. ಈ ಕಾರಣಕ್ಕೆ ಸಂಭಾಷಣೆಗಳನ್ನು ಬೇರೊಬ್ಬರು ಕೇಳಿಸಿಕೊಳ್ಳಲು ಆಗಲ್ಲ.ಆ್ಯಪಲ್ ಸಹ ಸ್ಮಾರ್ಟ್ ಹೋಮ್ ಡಿವೈಸ್‌ಗಳೊಂದಿಗೆ ನೀವು ನಡೆಸುತ್ತಿರುವ ಸಂಭಾಷಣೆಗಳನ್ನು ತಿಳಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದೆ.

ನಮ್ಮ ದೇಶದಲ್ಲಿ ಆ್ಯಪಲ್ ಹೋಮ್‌ಪಾಡ್ 2ನೇ ಜೆನ್ ಸ್ಪೀಕರ್ ಖರೀದಿಗೆ ಪ್ರೀಬುಕಿಂಗ್ ಆರಂಭಿಸಿದೆ. ಈ ಡಿವೈಸ್‌ನ ಮಾರಾಟ ಫೆಬ್ರವರಿ 3, 2023ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇರಲಿದ್ದು, ಆ್ಯಪಲ್ ಅಧಿಕೃತ ರಿಟೇಲರ್ ಶಾಪ್ ಹಾಗೂ ಆ್ಯಪಲ್ ಆನ್‌ಲೈನ್ ಶಾಪಿಂಗ್ ಮೂಲಕ ಖರೀದಿ ಮಾಡಬಹುದು. ಇದರ ಸಾಮಾನ್ಯ ದರ 32,900 ರೂ. ಎಂದು ಸಂಸ್ಥೆ ಹೇಳಿದೆ.

► ಸ್ಟೀಲ್ ಬಳಕೆಗೆ ಬಂದಿದ್ದು ಯಾವಾಗ? ಹೇಗೆ?

ಆರಂಭಿಕ ಯುಗದಲ್ಲಿ ಕಲ್ಲು, ಕಂಚು ಮತ್ತು ಕಬ್ಬಿಣವನ್ನು ಬಳಸುತ್ತಿದ್ದರು. ಸ್ಟೀಲ್ ಬಂದು ಕೈಗಾರಿಕಾ ಕ್ರಾಂತಿ ಯನ್ನು ಉಂಟುಮಾಡಿತು. ಆರ್ಕಿಯಾಲಜಿಕಲ್ ಎಕ್ಸ್ವೇಷನ್‌ಪ್ರಕಾರ ಸ್ಟೀಲ್‌ನ ಆರಂಭಿಕ ಉತ್ಪಾದನೆಯು ನಾಲ್ಕು ಸಾವಿರ ವರ್ಷಗಳ ಹಿಂದಿನಿಂದ ಪ್ರಾರಂಭವಾಗಿತ್ತು. ಕರಗಿದ ಪಿಗ್ ಕಬ್ಬಿಣವನ್ನು ಬಳಸಿ ಸ್ಟೀಲ್ ತಯಾರಿಸುವ ಬೇಸಿಮರ್ ಪ್ರಕ್ರಿಯೆಯು ಸ್ಟೀಲ್‌ನ ದೊಡ್ಡಮಟ್ಟದ ಉತ್ಪಾದನೆಗೆ ದಾರಿ ಮಾಡಿಕೊಟ್ಟಿತು. ಸೇತುವೆಗಳಿಂದ ಹಿಡಿದು, ಗಗನಚುಂಬಿ ಕಟ್ಟಡಗಳವರೆಗೆ ಎಲ್ಲದರ ಸೃಷ್ಟಿಯಲ್ಲಿ ಈಗ ಸ್ಟೀಲನ್ನು ಬಳಸಲಾಗುತ್ತದೆ.

► ಗೂಗಲ್ ಫೋಟೊ ನ್ಯೂ ಅಪ್‌ಡೇಟ್ ಫೀಚರ್

ಗೂಗಲ್ ಫೋಟೊ ಗಳು ಶೀಘ್ರದಲ್ಲೇ ಅಪ್ಲಿಕೇಶನ್‌ನ ಮುಖ್ಯ ಫೀಡ್‌ನಲ್ಲಿ ಇತರ ಚಿತ್ರಗಳ ಜೊತೆಗೆ RAW ಚಿತ್ರಗಳನ್ನು ತೋರಿಸಲು ಸಜ್ಜಾಗಿದೆ.

ಗೂಗಲ್ ಫೋಟೊಗಳು ಶೀಘ್ರದಲ್ಲೇ ಬಳಕೆದಾರ ನವೀಕೃತ ಇಂಟರ್ಫೇಸ್ ಪಡೆದುಕೊಳ್ಳಬಹುದು. ಶೀಘ್ರದಲ್ಲೇ RAW ಚಿತ್ರಗಳಿಗೆ ಸಮಗ್ರ ಅನುಭವವನ್ನು ಒದಗಿಸಬಹುದು. Pixel ಮತ್ತು Android ಫೋನ್‌ಗಳೆರಡರಲ್ಲೂ ಕ್ಯಾಮರಾ ಅಪ್ಲಿಕೇಶನ್‌ನಲ್ಲಿ RAW+JPEG ಕ್ಯಾಪ್ಚರ್ ಸಕ್ರಿಯಗೊಳಿಸುವುದು ಪ್ರಸಕ್ತ ಸಾಧನದಲ್ಲಿ ರಾ ಫೋಲ್ಡರ್ ರಚಿಸುತ್ತದೆ. ಪೂರ್ವನಿಯೋಜಿತವಾಗಿ, ಈ ನಿರ್ದಿಷ್ಟ ಫೋಲ್ಡರ್‌ನಲ್ಲಿನ ಬ್ಯಾಕಪ್ ಆಯ್ಕೆಯನ್ನು ಆಫ್ ಮಾಡಲಾಗಿದೆ, ಮುಖ್ಯ ಫೋಲ್ಡರ್‌ಗಾಗಿ ಬ್ಯಾಕಪ್ ಆನ್ ಆಗಿದ್ದರೂ ಸಹ. ಅವುಗಳನ್ನು ಶೇಖರಣಾ ಕ್ಲೌಡ್‌ನಲ್ಲಿ ಸಂಗ್ರಹಿಸದ ಕಾರಣ, Google ಫೋಟೊಗಳ ಅಪ್ಲಿಕೇಶನ್‌ನ ಮುಖ್ಯ ಫೀಡ್‌ನಲ್ಲಿ RAW ಫೈಲ್‌ಗಳು ಕಾಣಸಿಗುವುದಿಲ್ಲ.

ಶೀಘ್ರದಲ್ಲೇ RAW+JPEG ಚಿತ್ರಗಳ RAW ಫೈಲ್‌ಗಳನ್ನು ಅಪ್ಲಿಕೇಶನ್‌ನ ಮುಖ್ಯ ಫೀಡ್‌ನಲ್ಲಿ ಕಾಣಿಸಿಕೊಳ್ಳಲು ಸಕ್ರಿಯಗೊಳಿಸಬಹುದು. Google ಫೋಟೊಗಳ ಆವೃತ್ತಿ 6.20 ಮುಂಬರುವ ಬದಲಾವಣೆಯನ್ನು ಬಹಿರಂಗಪಡಿಸು ತ್ತದೆ. ಅದು ಬಳಕೆದಾರರ ಬ್ಯಾಕಪ್ ಸ್ಥಿತಿಯನ್ನು ಲೆಕ್ಕಿಸದೆ ಯಾವಾಗಲೂ RAW ಚಿತ್ರಗಳನ್ನು ಮುಖ್ಯ ಫೀಡ್‌ನಲ್ಲಿ ಪ್ರಸ್ತುತಪಡಿಸುತ್ತದೆ. ಇದರರ್ಥ ನವೀಕರಣ ವನ್ನು ಗೂಗಲ್ ಫೋಟೊಗಳ ಬ್ಯಾಕಪ್ ಆಫ್ ಮಾಡಿದರೂ ಸಹ ಪ್ರತಿ ಚಿತ್ರದ ಜೊತೆಗೆ RAW ಫೈಲ್ ಗೋಚರಿಸುತ್ತದೆ.

ಗೂಗಲ್ ಫೋಟೊಗಳ ಅಪ್ಲಿಕೇಶನ್ ಮುಖ್ಯ ಫೀಡ್‌ನಲ್ಲಿ, JPEG ಫೋಟೊ ಮತ್ತು RAW ಫೋಟೊ ಈ ಅಪ್‌ಡೇಟ್‌ನೊಂದಿಗೆ ಅಕ್ಕಪಕ್ಕದಲ್ಲಿ ಗೋಚರಿಸು ತ್ತದೆ. ಗೂಗಲ್ ಫೋಟೊಗಳು 6.20 ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲ ಆದರೆ ಇದು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.

► ಮೃತ ಸಮುದ್ರದ ಬಗ್ಗೆ ನಿಮಗೆಷ್ಟು ಗೊತ್ತು?

ಸಮುದ್ರದ ಬಗ್ಗೆ ಎಲ್ಲರಿಗೂ ಗೊತ್ತಿರುತ್ತೆ, ಆದರೆ ನಿಮಗೆ ಮೃತ ಸಮುದ್ರ ಅರ್ಥಾತ್ ಡೆಡ್ ಸೀ ಬಗ್ಗೆ ಗೊತ್ತಿದೆಯಾ?

‘ಎಂಡೋರ್ಹೆಕ್ ಸರೋವರ ವನ್ನು ವಾಸ್ತವವಾಗಿ ಮೃತ ಸಮುದ್ರ ಎಂದು ಕರೆಯುತ್ತಾರೆ. ಎಂಡೋರ್ಹೆಕ್ ಸರೋವರಗಳು ಸಾಮಾನ್ಯವಾಗಿ ತುಂಬಾ ಲವಣಯುಕ್ತ ನೀರು ಮತ್ತು ಉಪ್ಪಿನಿಂದ ಕೂಡಿರುತ್ತದೆ. ಏಕೆಂದರೆ ಇದರಲ್ಲಿ ಲವಣಗಳು ಶೇಖರಗೊಳ್ಳುತ್ತವೆ.ಮೃತ ಸಮುದ್ರವು ಈ ಗುಣಲಕ್ಷಣ ಎಂದರೆ ಇದು ಕ್ಯಾಸ್ಪಿಯನ್ ಸಮುದ್ರ ವಾಗಿದೆ, ಇದು ಏಶ್ಯ ಮತ್ತು ಯುರೋಪ್ ನಡುವೆ 371 ಸಾವಿರ ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಬೃಹತ್ ಉಪ್ಪುಸಹಿತ ಸರೋವರ.

ಮೃತ ಸಮುದ್ರವು ಸಮುದ್ರ ಮಟ್ಟಕ್ಕಿಂತ 435 ಅಟಡಿ ತಗ್ಗಿನಲ್ಲಿದೆ ಮತ್ತು ಇಸ್ರೇಲ್, ಜೋರ್ಡಾನ್ ಮತ್ತು ಫೆಲೆಸ್ತೀನ್ ವೆಸ್ಟ್ ಬ್ಯಾಂಕ್ ಭಾಗದ ಮಧ್ಯೆ ಇದೆ. ಮೃತ ಸಮುದ್ರದ ಗರಿಷ್ಠ ಅಗಲ 16 ಕಿ.ಮೀ.ಮತ್ತು ಉದ್ದ 80 ಕಿ.ಮೀ.. ಮೇಲ್ಮೈ ಯಲ್ಲಿ ಇದು ಸುಮಾರು 810 ಚದರ ಕಿ.ಮೀ. ಹೊಂದಿದೆ. ಅದರ ನೀರು ಮುಖ್ಯ ವಾಗಿ ಜೋರ್ಡಾನ್ ನದಿಯಿಂದ, ಆದರೆ ಇತರ ಸಣ್ಣ ಮೂಲಗಳಿಂದ ಬರುತ್ತದೆ. ಅಷ್ಟೇನೂ ಮಳೆಯಾಗದ ಪ್ರದೇಶದಲ್ಲಿ ಉಪನದಿ ಮತ್ತು ಬಾಷ್ಪೀಕರಣದ ನಡುವೆ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ.

ಮೃತ ಸಮುದ್ರವು ತುಂಬಾ ಉಪ್ಪಾಗಿರುತ್ತದೆ. ಏಕೆಂದರೆ, ಇದು ಎಂಡೋ ರ್ಹೆಕ್ ಜಲಾನಯನ ಪ್ರದೇಶದಲ್ಲಿದೆ, ಅಂದರೆ, ಇದಕ್ಕೆ ಯಾವುದೇ ಹೊರ ಹರಿವು ಇಲ್ಲ ಮತ್ತು ಸರೋವರವನ್ನು ತಲುಪುವ ಖನಿಜಗಳು ಅಲ್ಲೇ ಶಾಶ್ವತವಾಗಿಉಳಿದಿವೆ. ಎಲ್ಲಾ ಜಲಮೂಲಗಳು, ಅವುಗಳಲ್ಲಿ ಹೆಚ್ಚಿನವುಗಳು, ಕೆಲವು ನದಿ ಗಳು, ಕೆಲವು ತೊರೆಗಳನ್ನು ಹೊಂದಿವೆ. ನೀರು ಸಮುದ್ರಕ್ಕಿಂತ ಆರರಿಂದ ಏಳು ಪಟ್ಟು ಹೆಚ್ಚು ಉಪ್ಪಾಗಿರುತ್ತದೆ, ಆದ್ದರಿಂದ ಅಲ್ಲಿ ವಾಸಿಸಲು ಸಾಧ್ಯವಾಗುವು ದಿಲ್ಲ. ನೀರಿನಲ್ಲಿ ಮೀನುಗಳನ್ನು ಹಾಕಿದ್ರೂ ಸಾಯುತ್ತವೆ. ಏಕೆಂದರೆ ಅದರ ದೇಹವು ತಕ್ಷಣವೇ ಉಪ್ಪಿನ ಹರಳುಗಳಿಂದ ಮುಚ್ಚಲ್ಪಡುತ್ತದೆ.

► ಜೀವರಕ್ಷಕ ಆ್ಯಂಟಿಬಾಡೀಸ್ ಆವಿಷ್ಕಾರ!

ಆ್ಯಂಟಿಬಾಡೀಸ್ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು ಕೊಂದು ತಡೆಯುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸುತ್ತಿವೆ. ಲೂಯಿಸ್ ಪಾಶ್ಚರ್ ಮತ್ತು ರಾಬರ್ಟ್ ಕೋಚ್ 1928ರಲ್ಲಿ ಮೊದಲ ಆ್ಯಂಟಿಬಾಡೀಸ್ ಬಗ್ಗೆ ಮಾಹಿತಿ ನೀಡಿದ್ದರು. 1928ರಲ್ಲಿ ಅಲೆಕ್ಸಾಂಡರ್ ಪ್ಲೇಮಿಂಗ್, ಆ್ಯಂಟಿಬಾಡೀಸ್ ಗುಣಲಕ್ಷಣಗಳನ್ನು ಹೊಂದಿರುವ ಕೆಮಿಕಲ್ ಸಂಯುಕ್ತವಾದ ಪೆನಿಸಿಲಿನ್ ಗುರುತಿಸಿದರು. 20ನೇ ಶತಮಾನ ದುದ್ದಕ್ಕೂ ಆ್ಯಂಟಿಬಾಡೀಸ್ ವೇಗವಾಗಿ ಹರಡಿತು. ಆ್ಯಂಟಿಬಾಡೀಸ್ ತಿಳಿದಿರುವ ಪ್ರತಿಯೊಂದು ರೀತಿಯ ಸೋಂಕಿನ ವಿರುದ್ಧ ಹೋರಾಡು ತ್ತದೆ ಮತ್ತು ಜನರ ಆರೋಗ್ಯವನ್ನು ರಕ್ಷಿಸುತ್ತದೆ.

Similar News

ಜಗದಗಲ
ಜಗ ದಗಲ