'ಗೋ ಬ್ಯಾಕ್' ಆಕ್ರೋಶಕ್ಕೆ ಮಂಡ್ಯ ಉಸ್ತುವಾರಿಯಿಂದ ಆರ್.ಅಶೋಕ್ ಪಲಾಯನ: ಕಾಂಗ್ರೆಸ್
''ಸೋತು ಓಡಿಹೋಗುವವರನ್ನು ಸಾಮ್ರಾಟ ಎನ್ನುವುದಿಲ್ಲ''
ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಆರ್.ಅಶೋಕ್ ಅವರನ್ನು ಬಿಡುಗಡೆಗೊಳಿಸಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, '''#BJPvsBJP ಕಿತ್ತಾಟದ ಕಿಡಿ ಹೊತ್ತಿ ಕೆಂಡವಾಗಿ, ಕೆಂಡ ಜ್ವಾಲೆಯಾಗಿದೆ, ಬಿಜೆಪಿ ಭಸ್ಮವಾಗುವುದು ನಿಶ್ಚಿತ. 'ಗೋ ಬ್ಯಾಕ್' ಆಕ್ರೋಶಕ್ಕೆ ಮಂಡ್ಯ ಉಸ್ತುವಾರಿಯಿಂದ @RAshokaBJP ಪಲಾಯನ ಮಾಡುವ ಮೂಲಕ ಬಿಜೆಪಿ ಒಳಜಗಳ ಬೀದಿಗೆ ಬಿದ್ದಿದೆ'' ಎಂದು ಟೀಕಿಸಿದೆ.
''ಬಿಜೆಪಿಯ ಗುಂಪುಗಾರಿಕೆ ರಾಜ್ಯವನ್ನು ನುಂಗುತ್ತಿದೆ, ಯಾರ "ಸಂತೋಷ"ಕ್ಕಾಗಿ ಇದೆಲ್ಲ?'' ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
''ಅಶೋಕ್ ಅವರೇ, ಮಂಡ್ಯ ಉಸ್ತುವಾರಿಯಿಂದ ಪಲಾಯನ ಮಾಡಿದ್ದು ಏಕೆ? ಇದು ಪಲಾಯನವೇ ಅಥವಾ ಉಚ್ಛಾಟನೆಯೇ? ಒಂದು ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸಲಾಗದ ಅಸಾಮರ್ಥ್ಯವೇ? ಅಥವಾ ಪಕ್ಷದೊಳಗಿನ ಶತ್ರುಗಳ ಎದುರು ಸೋಲೊಪ್ಪಿಕೊಂಡಿದ್ದೆ? ಹೀಗೆ ಸೋತು ಓಡಿಹೋಗುವವರನ್ನು ಸಾಮ್ರಾಟ ಎನ್ನುವುದಿಲ್ಲ, ಉತ್ತರ ಕುಮಾರ ಎನ್ನುತ್ತಾರೆ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಅಶೋಕ್ ಮುಕ್ತ: ಸಿಎಂ ಬೊಮ್ಮಾಯಿ
ವಿಧಾನಸೌಧದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಸಚಿವ ಅಶೋಕ್ ಅವರು ತನ್ನನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತ ಮಾಡಿ ಎಂದು ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಆಶೆಯಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಯಾರನ್ನೂ ನೇಮಕ ಮಾಡಿಲ್ಲ ಎಂದು ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.
.
'@RAshokaBJP ಅವರೇ,
— Karnataka Congress (@INCKarnataka) February 10, 2023
ಮಂಡ್ಯ ಉಸ್ತುವಾರಿಯಿಂದ ಪಲಾಯನ ಮಾಡಿದ್ದು ಏಕೆ?
ಇದು ಪಲಾಯನವೇ ಅಥವಾ ಉಚ್ಛಾಟನೆಯೇ?
ಒಂದು ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸಲಾಗದ ಅಸಾಮರ್ಥ್ಯವೇ?
ಅಥವಾ ಪಕ್ಷದೊಳಗಿನ ಶತ್ರುಗಳ ಎದುರು ಸೋಲೊಪ್ಪಿಕೊಂಡಿದ್ದೆ?
ಹೀಗೆ ಸೋತು ಓಡಿಹೋಗುವವರನ್ನು ಸಾಮ್ರಾಟ ಎನ್ನುವುದಿಲ್ಲ, ಉತ್ತರ ಕುಮಾರ ಎನ್ನುತ್ತಾರೆ!#BJPvsBJP
#BJPvsBJP ಕಿತ್ತಾಟದ ಕಿಡಿ ಹೊತ್ತಿ ಕೆಂಡವಾಗಿ, ಕೆಂಡ ಜ್ವಾಲೆಯಾಗಿದೆ,
— Karnataka Congress (@INCKarnataka) February 10, 2023
ಬಿಜೆಪಿ ಭಸ್ಮವಾಗುವುದು ನಿಶ್ಚಿತ.
'ಗೋ ಬ್ಯಾಕ್' ಆಕ್ರೋಶಕ್ಕೆ ಮಂಡ್ಯ ಉಸ್ತುವಾರಿಯಿಂದ @RAshokaBJP ಪಲಾಯನ ಮಾಡುವ ಮೂಲಕ ಬಿಜೆಪಿ ಒಳಜಗಳ ಬೀದಿಗೆ ಬಿದ್ದಿದೆ.
ಬಿಜೆಪಿಯ ಗುಂಪುಗಾರಿಕೆ ರಾಜ್ಯವನ್ನು ನುಂಗುತ್ತಿದೆ,
ಯಾರ "ಸಂತೋಷ"ಕ್ಕಾಗಿ ಇದೆಲ್ಲ @BJP4Karnataka?