BJP ಯಿಂದ 8, JDSನಿಂದ 9 ಜನ ಶಾಸಕರು ಕಾಂಗ್ರೆಸ್ ಸೇರ್ತಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
Update: 2023-02-22 10:29 GMT
ಕೊಡಗು: ಮುಂದಿನ ಒಂದು ವಾರ ಅಥವಾ ಹತ್ತು ದಿವಸದಲ್ಲಿ 8 ಮಂದಿ ಬಿಜೆಪಿಯಿಂದ ಮತ್ತು JDSನಿಂದ 9 ಜನ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಈ ಕುರಿತು ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಬಿಜೆಪಿ ಮತ್ತು ಜೆಡಿಎಸ್ ನಿಂದ ಪ್ರಮುಖವಾಗಿ ಗೆಲ್ಲುವಂತ ಅಭ್ಯರ್ಥಿಗಳೇ ಕಾಂಗ್ರೆಸ್ ಸೇರಲಿದ್ದಾರೆ. ಆದರೆ, ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಬೇಕಾ, ಬೇಡವೋ ಅಂಥ ನಮ್ಮ ಚುನಾವಣಾ ಸಮಿತಿ ನಿರ್ಧರಿಸುತ್ತದೆ' ಎಂದು ಹೇಳಿದರು.
'ಆಪರೇಷನ್ ಹಸ್ತ' ಮಾಡಿಲ್ಲ:
''ನಾವು ಯಾರನ್ನೂ 'ಆಪರೇಷನ್ ಹಸ್ತ' ಮಾಡಿಲ್ಲ. ಅವರೇ ಅರ್ಜಿ ಹಾಕಿ ಪಕ್ಷ ಸೇರುತ್ತೇವೆ ಅಂತ ಹೇಳುತ್ತಿದ್ದಾರೆ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರ ಬರುತ್ತೆ ಎಂಬ ವಿಶ್ವಾಸದಿಂದಲೇ ಅವರೆಲ್ಲ ಕಾಂಗ್ರೆಸ್ ಸೇರುತ್ತಿದ್ದಾರೆ'' ಎಂದು ತಿಳಿಸಿದರು.