ಪಂಜಾಬ್ ಜೈಲಿನಲ್ಲಿ ಕೈದಿಗಳ ಘರ್ಷಣೆ: ಮೂಸೆವಾಲಾ ಕೊಲೆ ಆರೋಪಿಗಳಿಬ್ಬರ ಹತ್ಯೆ
Update: 2023-02-26 17:04 GMT
ಚಂಡಿಗಡ, ಫೆ.28: ಪಂಜಾಬಿನ ತರ್ನ್ತರನ್ ಜಿಲ್ಲೆಯ ಗೋಯಿಂದವಾಲ್ ಸಾಹಿಬ್ ಕೇಂದ್ರ ಕಾರಾಗೃಹದಲ್ಲಿ ರವಿವಾರ ಕೈದಿಗಳ ನಡುವೆ ನಡೆದ ಘರ್ಷಣೆಗಳಲ್ಲಿ ಇಬ್ಬರು ಕೈದಿಗಳು ಕೊಲ್ಲಲ್ಪಟ್ಟಿದ್ದಾರೆ.
ಕೊಲೆಯಾದವರು ಕಳೆದ ವರ್ಷ ನಡೆದಿದ್ದ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಅವರು ಇತರ ಪ್ರಕರಣಗಳನ್ನೂ ಎದುರಿಸುತ್ತಿದ್ದರು ಎಂದು ಎಸ್ಎಸ್ಪಿ ಗುರ್ಮೀತ್ ಸಿಂಗ್ ಚೌಹಾಣ ತಿಳಿಸಿದರು.
ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿದ್ದ ಶುಭದೀಪ ಸಿಂಗ್ ಸಿಧು ಅವರನ್ನು ಕಳೆದ ವರ್ಷದ ಮೇ 29ರಂದು ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.