ಅರಸೀಕೆರೆ: ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿಗೆ
Update: 2023-03-01 16:00 GMT
ಅರಸೀಕೆರೆ: ಮಾ,1: ತಾಲೂಕಿನ ಬಾಣಾವರ ಹೋಬಳಿ ಬೈರಗೊಂಡನಹಳ್ಳಿ ಬೋವಿ ಕಾಲೋನಿ ಅಕ್ಕ ಪಕ್ಕದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಯಾಗಿದೆ.
ಅರಸೀಕೆರೆ ತಾಲೂಕಿನ ಬಾಣವರ ಹೋಬಳಿ ಬೈರಗೊಂಡನಹಳ್ಳಿ ಬೋವಿ ಕಾಲೋನಿ ಅಕ್ಕ ಪಕ್ಕ ದಲ್ಲಿ ಆಗಾಗ ಚಿರತೆ ಬಂದು ಹೋಗುತ್ತಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯ ಇಲಾಖೆ ಪರಿಶೀಲನೆ ಮಾಡಿ ರೇಂಜರ್ ಫಾರೆಸ್ಟ್ ಆಫೀಸರ್ ಎಚ್ ಕೆ ಅಮಿತ್ ಅವರ ಮಾರ್ಗದರ್ಶನದಲ್ಲಿ ಕೆಲವು ಸ್ಥಳಗಳ ಮಾಹಿತಿಗಳನ್ನು ಪಡೆದುಕೊಂಡು ಆ ಜಾಗದಲ್ಲಿ ಕೆಲವು ದಿನಗಳಿಂದ ಬೋನನ್ನು ಇಟ್ಟಿದ್ದರು.
ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡದರು. ಬೋನಿನಲ್ಲಿ ಸೆರೆಯಾಗಿರುವ ಚಿರತೆಯನ್ನು ಕಾಡಿನ ಒಳಗೆ ಬಿಡಲಾಗುವುದು ಎಂದು ಮಾಹಿತಿ ತಿಳಿಸಿದರು.