ಉರಿಗೌಡ, ನಂಜೇಗೌಡರ ಬಗ್ಗೆ ಹೆಮ್ಮೆ ಇದೆ: ಶೋಭಾ ಕರಂದ್ಲಾಜೆ
Update: 2023-03-19 11:23 GMT
ಹುಬ್ಬಳ್ಳಿ: 'ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು, ಅವರು ಧರ್ಮಕ್ಕಾಗಿ ಹೋರಾಟ ಮಾಡಿದವರಾಗಿದ್ದಾರೆ' ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು (ರವಿವಾರ) ಮಾತನಾಡಿದ ಅವರು, 'ಉರಿಗೌಡ, ನಂಜೇಗೌಡರು ನಮ್ಮ ದೇವಸ್ಥಾನ ಉಳಿಸುವುದಾಕ್ಕಾಗಿ ಹೋರಾಟ ಮಾಡಿದ್ದಾರೆ. ಹಿಂದುಗಳ ಕ್ರೈಸ್ತ ನರಮೇಧ ಖಂಡಿಸಿ ಹೋರಾಡಿದ್ದಾರೆ. ಹೀಗಾಗಿ ಉರಿಗೌಡ ನಂಜೇಗೌಡರ ಬಗ್ಗೆ ಹೆಮ್ಮೆಯ ಇದೆ' ಎಂದು ಹೇಳಿದರು.
'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ಮತವಾಗಿ ಪರಿವರ್ತನೆ ಆಗಿಲ್ಲ. ಅವರು ನಾಳೆ ಕರ್ನಾಟಕಕ್ಕೆ ಬರುತಿದ್ದು, ಬಂದ ಪುಟ್ಟ ಹೋದ ಪುಟ್ಟ ಆದಂತೆ ಆಗುತ್ತದೆ. ಗುಜರಾತ್ ಚುನಾವಣೆಯಲ್ಲಿಯೇ ಅವರು ಭಾರತ ಜೋಡೊ ಯಾತ್ರೆ ಮಾಡುತಿದ್ದರು. ಅದರ ಪರಿಣಾಮ ಏನು ಅಂತಾ ಗುಜರಾತ್ ಚುನಾವಣೆಯಲ್ಲಿ ರುಜುವಾತಾಗಿದ್ದು, ಅಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನ ಪಡೆದು ಸರ್ಕಾರ ಮಾಡಿದೆವು' ಎಂದು ಹೇಳಿದರು.