ಹೂಡೆ ಸಾಲಿಹಾತ್‌ನಲ್ಲಿ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆ
Update: 2023-03-20 14:15 GMT
ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸಾಲಿಹಾತ್ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಇವಿಎಂ/ವಿವಿ ಪ್ಯಾಟ್‌ನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಮತ ಯಂತ್ರವನ್ನು ಬಳಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಉಡುಪಿ ಚುನಾವಣೆ ಸಿಬ್ಬಂದಿ ರಾಧಾಕೃಷ್ಣ ಭಟ್ ನೀಡಿದರು. ವಿದ್ಯಾರ್ಥಿಗಳಿಗೆ ಮತ ಚಲಾವಣೆಯ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಈ ಬಗ್ಗೆ ಸಂಶಯಗಳನ್ನು ದೂರಿ ಕರಿಸಿದರು.
ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಪಂನ ಗ್ರಾಮ ಲೆಕ್ಕಾಧಿಕಾರಿ ಜಯಶ್ರೀ, ಸಿಬ್ಬಂದಿ ರಝಾಕ್, ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಪ್ರಾಚಾರ್ಯ ಡಾ. ಶಬಿನಾ, ದಿವ್ಯಾ ಪೈ ಮೊದಲಾದವರು ಉಪಸ್ಥಿತರಿದ್ದರು.