ಉಳ್ಳಾಲ ದರ್ಗಾಕ್ಕೆ ಕೇಂದ್ರ ಹಜ್ಜ್ ಕಮಿಟಿ ಚೆಯರ್‌ಮ್ಯಾನ್ ಭೇಟಿ
Update: 2023-03-20 18:02 GMT
ಉಳ್ಳಾಲ: ಕೇಂದ್ರ ಹಜ್ಜ್ ಕಮಿಟಿ ಚೆಯರ್‌ಮ್ಯಾನ್ ಅಬ್ದುಲ್ಲ ಕುಟ್ಟಿಯವರು ರವಿವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು.
ಈ ಸಂದರ್ಭ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿಯವರು ಹಜ್ಜ್ ಕಮಿಟಿ ಚೆಯರ್‌ಮ್ಯಾನ್ ಅಬ್ದುಲ್ಲ ಕುಟ್ಟಿಯವರನ್ನು ಸ್ವಾಗತಿಸಿದರು. ದರ್ಗಾ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದರ್ಗಾ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಯು.ಎಮ್ ಅಶ್ರಫ್ ಅಹ್ಮದ್ ರೈಟ್ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಮುಸ್ತಫ ಮದನಿನಗರ, ಇಸಾಕ್ ಮೇಲಂಗಡಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.