ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಸುಳ್ಯ ಪಿಎಫ್‍ಐ ಕಚೇರಿ ಜಪ್ತಿ ಮಾಡಿದ ಎನ್‍ಐಎ

Update: 2023-03-27 15:16 GMT

ಸುಳ್ಯ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೇಟೆಯ ಆಲೆಟ್ಟಿ ರಸ್ತೆಯಲ್ಲಿದ್ದ ಪಿಎಫ್‍ಐ ಕಚೇರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ವಶಪಡಿಸಿಕೊಂಡಿದೆ.

ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಪಿಎಫ್‍ಐ ಕಚೇರಿಯನ್ನು ಕೃತ್ಯಕ್ಕೆ ಬಳಸಿದ ಆರೋಪದಲ್ಲಿ ಎನ್‍ಐಎ ಸ್ವಾದೀನಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಕಟ್ಟಡ ಮಾಲಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ ಬಾಡಿಗೆಗೆ ನೀಡಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.

ಪಿಎಫ್‍ಐ ಕಚೇರಿಗೆ ಬೆಂಗಳೂರು ಎನ್‍ಐಎ ಬ್ಯಾಂಚ್‍ನ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಅವರ ಸಹಿ ಇರುವ ಎರಡು ಪುಟದ ನೋಟಿಸನ್ನು ಕಚೇರಿಯ ಬಾಗಿಗೆ ಅಂಟಿಸಲಾಗಿದೆ. ನೋಟಿಸಿನಲ್ಲಿ ನಿರ್ದೇಶನಗಳನ್ನು ಸೂಚಿಸಲಾಗಿದೆ. ಇದೇ ಕಚೇರಿಯಲ್ಲೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಮೂಲಗಳು ವಿವರಿಸಿವೆ.

ತಮ್ಮ ಮೂರನೇ ಪ್ರಯತ್ನದಲ್ಲಿ ದುಷ್ಕರ್ಮಿಗಳು ಪ್ರವೀಣ್ ಅವರನ್ನು ಹತ್ಯೆಗೈದಿದ್ದರು. ಬೆಂಗಳೂರಿನ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ 20 ಮಂದಿಯ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. ಚಾರ್ಜ್ ಶೀಟ್‍ನಲ್ಲಿ 1,500 ಪುಟಗಳು ಮತ್ತು 240 ಸಾಕ್ಷಿಗಳ ಹೇಳಿಕೆಗಳಿವೆ.

Similar News