ರಿಕ್ಷಾ ಚಾಲಕ ನಾಪತ್ತೆ
Update: 2023-03-28 14:34 GMT
ಶಿರ್ವ : ಕುತ್ಯಾರಿನಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿದ್ದ ಕುತ್ಯಾರಿನ ಶೈಲೇಶ್ ಕೆ.ಪ್ರಭು (44) ಎಂಬವರು ಮಾ.27ರಂದು ಬೆಳಗ್ಗೆ ಮನೆ ಯಿಂದ ಅಟೋ ರಿಕ್ಷಾದಲ್ಲಿ ಬಾಡಿಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.