ವ್ಯಕ್ತಿಗೆ ತಂಡದಿಂದ ಹಲ್ಲೆ ಆರೋಪ: ಪ್ರಕರಣ ದಾಖಲು
Update: 2023-03-28 14:42 GMT
ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆಯ ಬಾರ್‌ವೊಂದರ ಬಳಿ ವ್ಯಕ್ತಿಗೆ ಇಬ್ಬರು ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಎಂಬವರು ಸೋಮವಾರ ರಾತ್ರಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಾ ವೇಟರ್ ಬಳಿ ಮಾತನಾಡುತ್ತಿದ್ದಾಗ ಎದುರು ಕುಳಿತಿದ್ದ ಇಬ್ಬರು ಅಪರಿಚಿತ ಯುವಕರು ಅದಕ್ಕೆ ಆಕ್ಷೇಪಿಸಿದರು ಎನ್ನಲಾಗಿದೆ. ಆವಾಗ ಸುರೇಶ್ ‘ನಾನು ಕೂಡ ಬಾರಿಗೆ ಕುಡಿಯಲು ಬಂದಿದ್ದು’ ಎನ್ನುತ್ತಾ ಬಾರ್‌ನಿಂದ ಹೊರಗೆ ಬರುವಾಗ ಅಪರಿಚಿತ ಯುವಕರು ಹಿಂಬಾಲಿಸಿಕೊಂಡು ಬಂದು ರಸ್ತೆಗೆ ದೂಡಿ ಕಲ್ಲಿನಿಂದ ಮುಖಕ್ಕೆ ಹೊಡೆದು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.