ವಿಟ್ಲ : ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಸೆರೆ
Update: 2023-03-29 15:29 GMT
ವಿಟ್ಲ : ಅಂಗಡಿ ಮಾಲಕನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆಸಿದ ಪ್ರಕರಣ ವಿಟ್ಲ ಕಸಬ ಗ್ರಾಮದ ರಂಗರಮಜಲು ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನು ಅಲಿಯಾಸ್ ಮನೋಹರ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಜ. 20 ರಿಂದ ಮಾ. 20 ರವರೆಗೆ ಎರಡು ತಿಂಗಳ ಕಾಲ ವಿಟ್ಲ ಕಸಬ ಗ್ರಾಮದ ರಂಗರಮಜಲು ಮುರಳಿಧರ ಎಂಬವರ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಆರೋಪಿ ಒಟ್ಟು 3,20,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮುರಳಿಧರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.