ಕಲಬುರಗಿ: ಚೆಕ್ ಪೋಸ್ಟ್ ನಲ್ಲಿ 1 ಕೋಟಿ ರೂ. ನಗದು ಜಪ್ತಿ
Update: 2023-03-31 06:37 GMT
ಕಲಬುರಗಿ,ಮಾ.31: ಕಲಬುರಗಿ ತಾಲೂಕಿನ ಅಫಜಲಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಫರಹತ್ತಬಾದ್ ಚೆಕ್ ಪೋಸ್ಟ್ ನಲ್ಲಿ 1 ಕೋಟಿ ರೂ ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನಲೆ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರುದಿದ್ದು, ವಾಹನಗಳನ್ನು ತಪಾಸಣೆ ನಡೆಸುತ್ತಿರುವ ವೇಳೆ ಯಾವುದೇ ದಾಖಲೆಯಿಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದ ರವಿ ಮುಡಬೂಳ ಎಂಬವನನ್ನು ವಶಕ್ಕೆ ಪಡೆದ್ದಾರೆ.
ಕಾರು ತಪಾಸಣೆ ನಡೆಸಿದಾಗ 1 ಕೋಟಿ ರೂ. ನಗದು ಹಣ ಪತ್ತೆಯಾಗಿದ್ದು, ತಕ್ಷಣ ಹಣ ಮತ್ತು ರವಿ ಮುಡಬೂಳನನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.