ಕುನೋ ರಾಷ್ಟ್ರೀಯ ಉದ್ಯಾನಕ್ಕೆ ವಿದೇಶದಿಂದ ತಂದಿದ್ದ ಮತ್ತೊಂದು ಚೀತಾ ಸಾವು

Update: 2023-04-23 17:56 GMT

ಭೋಪಾಲ: ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್ (ಕೆಎನ್ಪಿ)ಗೆ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ‘ಉದಯ’ ರವಿವಾರ ಮೃತಪಟ್ಟಿದೆ. ಅದಕ್ಕೆ ಆರು ವರ್ಷ ವಯಸ್ಸಾಗಿತ್ತು.

ಇದು ಇತ್ತೀಚಿನ ದಿನಗಳಲ್ಲಿ ಕುನೊ ನ್ಯಾಷನಲ್ ಪಾರ್ಕ್ ನಲ್ಲಿ ಇಂತಹ ಎರಡನೇ ಘಟನೆಯಾಗಿದೆ. ಮಾ.೨೭ರಂದು ನಮೀಬಿಯಾದ ಚೀತಾ ‘ಸಷಾ’ ಮೂತ್ರಪಿಂಡ ಕಾಯಿಲೆಯಿಂದ ಮೃತಪಟ್ಟಿತ್ತು.

ಬೆಳಿಗ್ಗೆ ಎಂದಿನಂತೆ ಪರಿಶೀಲನೆ ನಡೆಸುತ್ತಿದ್ದಾಗ ‘ಉದಯ’ ಅಸ್ವಸ್ಥ ಸ್ಥಿತಿಯಲ್ಲಿದ್ದುದು ಪತ್ತೆಯಾಗಿತ್ತು. ಕೆಎನ್ಪಿಯ ಪಶುವೈದ್ಯರು ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಚೀತಾವನ್ನು ಚಿಕಿತ್ಸೆಗಾಗಿ ವಿಶಾಲ ಆವರಣದಿಂದ ಹೊರಕ್ಕೆ ತರಲಾಗಿತ್ತು, ಆದರೆ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಅದು ಸಾವನ್ನಪ್ಪಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜೆ.ಎಸ್.ಚೌಹಾಣ ತಿಳಿಸಿದರು.

Similar News