ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ

Update: 2023-04-25 16:57 GMT

ಹೊಸದಿಲ್ಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಪ್ರಮುಖ ಪ್ರಕಾಶ್ ಸಿಂಗ್ ಬಾದಲ್ ಅವರು ಮಂಗಳವಾರ 95 ನೇ ವಯಸ್ಸಿನಲ್ಲಿ ನಿಧನರಾದರು.  ಉಸಿರಾಟದ ಸಮಸ್ಯೆ ಹೊಂದಿದ್ದ ಅವರನ್ನು  ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಮಂಗಳವಾರ ರಾತ್ರಿ 8:28ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. 

ಪ್ರಕಾಶ್ ಸಿಂಗ್ ಸಾವಿನ ಸುದ್ದಿಯನ್ನು ಅವರ ಮಗ ಸುಖ್ಬೀರ್ ಸಿಂಗ್ ಬಾದಲ್ ರ ಆಪ್ತ ಸಹಾಯಕರು ಧೃಡೀಕರಿಸಿದ್ದಾರೆ.  ಅವರ ಅಂತಿಮ ಸಂಸ್ಕಾರವು ಭಟಿಂಡದ ಬಾದಲ್ ಗ್ರಾಮದಲ್ಲಿ ನಡೆಯಲಿದ್ದು,  ಬುಧವಾರ ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಮೊಹಾಲಿಯಿಂದ ಬಾದಲ್ ಗ್ರಾಮಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.

Similar News