ತಮ್ಮ ಮಕ್ಕಳಿಗೆ ವಿವಾಹದ ಸಮಾನತೆ ಕೋರಿ ಸಿಜೆಐಗೆ ಪತ್ರ ಬರೆದ ಎಲ್‌ಜಿಬಿಟಿಕ್ಯುಐಎ ಪೋಷಕರ ಸಂಘಟನೆ

Update: 2023-04-25 18:27 GMT

ಹೊಸದಿಲ್ಲಿ, ಎ. 25: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠಕ್ಕೆ ಪತ್ರಬರೆದಿರುವ ಎಲ್‌ಜಿಬಿಟಿಕ್ಯುಐಎ ಪ್ಲಸ್‌ನ 400ಕ್ಕೂ ಅಧಿಕ ಪೋಷಕರ ಗುಂಪು, ತಮ್ಮ ಎಲ್‌ಜಿಬಿಟಿಕ್ಯುಐಎ ಪ್ಲಸ್ ಆಗಿರುವ ಮಕ್ಕಳಿಗೆ ವಿವಾಹ ಸಮಾನತೆಯ ಹಕ್ಕು ನೀಡುವಂತೆ ಕೋರಿದೆ. 

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಯ ಗುಚ್ಛದ ವಿಚಾರಣೆಯನ್ನು ಸಿಜೆಐ ಡಿ.ವೈ. ಚಂದ್ರಚೂಡ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿರುವ ಸಂದರ್ಭ ‘ಸ್ವೀಕಾರ್ -ದಿ ರೈನ್‌ಬೋ ಪೇರೆಂಟ್ಸ್’ ಪೀಠಕ್ಕೆ ಸಲ್ಲಿಸಿದ ಪತ್ರ ಪ್ರಾಮುಖ್ಯತೆ ಪಡೆದುಕೊಂಡಿದೆ. 

‘‘ದೇಶದಲ್ಲಿ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನಮ್ಮ ಮಕ್ಕಳು ತಮ್ಮ ಸಂಬಂಧಕ್ಕೆ ಅಂತಿಮ ಕಾನೂನು ಮಾನ್ಯತೆ ಕಂಡುಕೊಳ್ಳುವುದನ್ನು ನೋಡಲು ನಾವು ಬಯಸುತ್ತೇವೆ’’ ಎಂದು ಅವರು ಹೇಳಿದ್ದಾರೆ. 

‘‘ನಮಗೆ ಪ್ರಾಯವಾಗುತ್ತಿದೆ. ನಮ್ಮಲ್ಲಿ ಕೆಲವರು 80 ವರ್ಷ ತಲುಪಲಿದ್ದಾರೆ. ನಮ್ಮ ಜೀವಿತಾವಧಿಯಲ್ಲಿ ನಮ್ಮ ಮಕ್ಕಳ ಸಲಿಂಗ ವಿವಾಹಕ್ಕೆ ಕಾನೂನು ಮುದ್ರೆ ಬೀಳುವುದನ್ನು ಎದುರು ನೋಡುತ್ತಿದ್ದೇವೆ’’ ಎಂದು ಗುಂಪು ಪತ್ರದಲ್ಲಿ ಹೇಳಿದೆ. 

ಎಲ್‌ಜಿಬಿಟಿಕ್ಯುಐಎಪ್ಲಸ್ ಮಕ್ಕಳನ್ನು ಸಂಪೂರ್ಣವಾಗಿ ಸ್ವೀಕರಿಸುವಲ್ಲಿ ಪರಸ್ಪರ ಬೆಂಬಲಿಸುವ ಹಾಗೂ ಕುಟುಂಬವಾಗಿ ಸಂಭ್ರಮಿಸುವುದನ್ನು ಗುರಿಯಾಗಿರಿಸಿಕೊಂಡಿರುವ ಭಾರತೀಯ ಎಲ್‌ಜಿಬಿಟಿಕ್ಯುಐಎಪ್ಲಸ್ ಮಕ್ಕಳ ಹೆತ್ತವರಿಂಂದ ರೂಪುಗೊಂಡ ಗುಂಪೇ ‘ಸ್ವೀಕಾರ್-ದಿ ರೈನ್‌ಬೋ ಪೇರೆಂಟ್ಸ್’

‘‘ವಿವಾಹವನ್ನು ಸಮಾನವಾಗಿ ಪರಿಗಣಿಸಿ ಎಂದು ನಾವು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ’’ ಎಂದು ಪತ್ರ ಹೇಳಿದೆ. 

Similar News