ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೆ ಹಾಕಿದಂತೆ: ಶಾಸಕ ಪ್ರೀತಂ ಗೌಡ ಹೇಳಿಕೆಯ ವಿಡಿಯೋ ವೈರಲ್

Update: 2023-04-28 10:30 GMT

ಹಾಸನ: 'ಜನತಾ ದಳಕ್ಕೂ ಮತ ಹಾಕಿದರೆ, ಬಿಜೆಪಿಗೆ ಮತ ಹಾಕಿದಂತೆ' ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿಕೆ ನೀಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ರಾತ್ರಿ ವೇಳೆ ಸಾರ್ವಜನಿಕೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, 'ನಿಮ್ಮ ತಿಳುವಳಿಕೆಗಾಗಿ ಹೇಳುತ್ತಿದ್ದೇನೆ. ಜೆಡಿಎಸ್‌ಗೆ ಮತ ಹಾಕುವುದು ಬಿಜೆಪಿಗೆ ಮತ ಹಾಕುವುದಲ್ಲದೆ ಬೇರೇನೂ ಅಲ್ಲ ಎಂಬುದಾಗಿ ನಾನು ಸ್ಪಷ್ಟಪಡಿಸುತ್ತಿದ್ದೇನೆ' ಎಂದು ಹೇಳುತ್ತಾರೆ.

ಅಲ್ಲದೇ, 'ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮೋದಿ ಸಾಹೇಬರು ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಏಕೆಂದರೆ ಜೆಡಿಎಸ್ ನವರು ಹೇಗೂ ಕೇವಲ 20-25 ಸ್ಥಾನಗಳನ್ನಷ್ಟೇ ಗೆಲ್ಲುತ್ತಾರೆ' ಎಂದು ಅವರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. 

Similar News