ವಿಮಾ ಹಗರಣ: ವಿಚಾರಣೆ ನಡೆಸಲು ಸತ್ಯಪಾಲ್ ಮಲಿಕ್ ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು

Update: 2023-04-28 08:19 GMT

ಹೊಸದಿಲ್ಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ವಿಮಾ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik )ಅವರನ್ನು ಸಿಬಿಐ ಶುಕ್ರವಾರ ವಿಚಾರಣೆ ನಡೆಸಲಿದೆ ಎಂದು  ಅಧಿಕಾರಿಗಳು ಹೇಳಿದರು. ವಿಮೆಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಲು ನನಗೆ ಲಂಚ ಆಮಿಷವೊಡ್ಡಲಾಗಿತ್ತು ಎಂದು ಮಲಿಕ್ ಹೇಳಿಕೆ ನೀಡಿದ ಬಳಿಕ ಹಗರಣ ಬೆಳಕಿಗೆ ಬಂದಿತ್ತು.

ಸಿಬಿಐ ತಂಡವೊಂದು ಬೆಳಗ್ಗೆ 11.45ರ ಸುಮಾರಿಗೆ ರಾಷ್ಟ್ರ ರಾಜಧಾನಿಯ ಆರ್‌ಕೆ ಪುರಂನಲ್ಲಿರುವ  ಮಲಿಕ್‌ ಅವರ ಸೋಮ್ ವಿಹಾರ್ ನಿವಾಸಕ್ಕೆ ಆಗಮಿಸಿ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆಗಳನ್ನು ಕೇಳಿದೆ ಎಂದು ಅಧಿಕಾರಿ ಹೇಳಿದರು.

ಮಲಿಕ್ ಇದುವರೆಗೆ ಪ್ರಕರಣದಲ್ಲಿ ಆರೋಪಿ ಅಥವಾ ಶಂಕಿತರಲ್ಲ ಎಂದು ಅಧಿಕಾರಿ ಹೇಳಿದರು.

ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಮಲಿಕ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಏಳು ತಿಂಗಳಲ್ಲಿ ಇದೀಗ  ಎರಡನೇ ಬಾರಿ ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಹಾರ, ಜಮ್ಮು ಮತ್ತು ಕಾಶ್ಮೀರ, ಗೋವಾ ಹಾಗೂ  ಮೇಘಾಲಯದಲ್ಲಿ ರಾಜ್ಯಪಾಲರ ಜವಾಬ್ದಾರಿಯನ್ನು ಮುಗಿಸಿದ ನಂತರ ಮಲಿಕ್ ಅವರ ಹೇಳಿಕೆಯನ್ನು ದಾಖಲಿಸಲಾಗಿತ್ತು.

Similar News