ಜೆಡಿಎಸ್‌ಗೆ ಮತ ಹಾಕಿದರೆ, ಕಾಂಗ್ರೆಸ್‌ಗೆ ಹಾಕಿದಂತೆ: ಪ್ರಧಾನಿ ಮೋದಿ
ಬೇಲೂರು, ಎ.30: 'ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು' ಎಂದು ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಹೊರವಲಯದ ಸುರಪುರ ಬಳಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
''ಜೆಡಿಎಸ್ ಪಕ್ಷಕ್ಕೆ ಓಟು ನೀಡಿದರೆ ಕಾಂಗ್ರೆಸ್‌ಗೆ ನೀಡಿದಂತೆ. ಜೆಡಿಎಸ್ 15ಅಥಾವ 20 ಸ್ಥಾನಗಳನ್ನು ಪಡೆದು ರಾಜ್ಯವನ್ನು ಲೂಟಿ ಹೊಡೆಯುವ ಕನಸು ಕಾಣುತ್ತಿದೆ'' ಎಂದು ಹೇಳಿದರು.
ಇದನ್ನೂ ಓದಿ: ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೆ ಹಾಕಿದಂತೆ: ಶಾಸಕ ಪ್ರೀತಂ ಗೌಡ ಹೇಳಿಕೆಯ ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಕೇಂದ್ರ ಕೃಷಿ ಖಾತೆ ಸಚಿವೆ ಶೋಭ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿಗಳಾದ ಹುಲ್ಲಹಳ್ಳಿ ಸುರೇಶ್, ಜಿವಿಟಿ ಬಸವರಾಜ್, ಸಿಮೆಂಟ್ ಮಂಜು, ದೇವರಾಜೇಗೌಡ, ಬೆಳ್ಳಿ ಪ್ರಕಾಶ್ ಮತ್ತು ಯೋಗಾರಮೇಶ್, ಶಾಸಕ ಎ.ಟಿ.ರಾಮಸ್ವಾಮಿ, ರೇಣುಕುಮಾರ್, ಅಡಗೂರು ಆನಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.